

ರಬಕವಿ/ಬನಹಟ್ಟಿ: ಮಾನವೀಯ ಮೌಲ್ಯಗಳ ಭಂಡಾರ ತುಂಬಿ ತುಳುಕುತ್ತಿದ್ದರು ಶರಣರು ಅನುಭಾವ ಮಂಟಪ ರಚನೆಗೊಳಿಸುವ ಮೂಲಕ ಕತ್ತಲೆಯಲ್ಲಿದ್ದ ಜಗತ್ತಿಗೆ ಬೆಳಕು ನೀಡಿದವರು ಎಂದು ಹಾವೇರಿಯ ಚೌಡಯ್ಯ ಗುರುಪೀಠದ ಜಗದ್ಗುರು ಶಾಂತ ಭೀಷ್ಮ ಶ್ರೀಗಳು ಚೌಡಯ್ಯ ಸ್ವಾಮೀಜಿ ಹೇಳಿದರು.
ಬನಹಟ್ಟಿ ದೇವರ ದಾಸಿಮಯ್ಯ ಕಾಲನಿಯ ಮಹಾಂತ ಮಂದಾರ ಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶರಣರ ಅನುಭಾವ ಮೇಳ ಹಾಗೂ ಶರಣ ದಂಪತಿ ವಿವಾಹದ ಬೆಳ್ಳಿ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಪಟ್ಟಣದ 25 ಶರಣ ದಂಪತಿಗೆ ಮದುವೆ ಬೆಳ್ಳಿ ಮಹೋತ್ಸವ ನಿಮಿತ್ತ ಸನ್ಮಾನಿಸಲಾಯಿತು. ಮಹಾಂತ ದೇವರು ಅಧ್ಯಕ್ಷತೆ ವಹಿಸಿದ್ದರು. ಗುಂದ್ವಾನದ ಸೈಬಾನ್ ಮಹಾರಾಜರು ಅನುಭಾವ ನೀಡಿದರು. ಅತಿಥಿಗಳಾಗಿ ಶಂಕರ ಜುಂಜಪ್ಪನವರ, ರಾಣಿಬೆನ್ನೂರಿನ ಆರ್.ಎಚ್.ಐರಾನಿ, ರಾಜು ಅಂಬಲಿ, ಈರಪ್ಪ ಬರಗಲ್, ಮಲ್ಲಿಕಾರ್ಜುನ ತುಂಗಳ ಆಗಮಿಸಿದ್ದರು.
ಮಹಾದೇವ ಪಾವಟೆ, ರಾಚಪ್ಪ ಹಟ್ಟಿ, ರಮೇಶ ಮೂಲಿ, ಮುಬಾರಕ್ ಕುಲಹಳ್ಳಿ, ಪ್ರಶಾಂತ ಐಗಳಿ, ಬಸವರಾಜ ಐವಳ್ಳಿ, ಶಶಿಧರ ಬೀಳಗಿ, ಅಶೋಕ ಫಿರಂಗಿ, ಎಸ್.ಎಂ. ಮೇಟಿಪಾಟೀಲ, ಬಾಳಪ್ಪ ಮಗದುಮ್, ಪ್ರಶಾಂತ ತೆಲಸಂಗ, ಶಿವಾಜಿ ಪಾರಕೆ, ಚೇತನ ಬೀಳಗಿ, ಅಕ್ಷತಾ ನಾಗಲೋಟಿ ಮತ್ತಿತರರು ಉಪಸ್ಥಿತರಿದ್ದರು.
ಸಿದ್ರಾಯ ಅಂಬಿ ಸ್ವಾಗತಿಸಿದರು. ಪರಮಾನಂದ ಭಾವಿಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎ. ಗುಟ್ಲಿ ನಿರೂಪಿಸಿದರು. ಅಣ್ಣಪ್ಪ ಬಾಣಕಾರ ವಂದಿಸಿದರು.
ದಾಸ, ಸಂತ, ಪೈಗಂಬರರು ಜಗತ್ತಿಗೆ ಒಳ್ಳೆಯ ಸಂದೇಶಗಳನ್ನು ನೀಡುವ ಮೂಲಕ ಬದುಕುವ ಕಲೆಯನ್ನು ನೀಡಿ ಇಂದಿಗೂ ಪ್ರಸ್ತುತವಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಮುನ್ನಡೆದರೆ ಬದುಕು ಹಸನಾಗುವುದು.
- ಶಾಂತ ಭೀಷ್ಮ ಶ್ರೀಗಳು, ಚೌಡಯ್ಯ ಗುರುಪೀಠ, ಹಾವೇರಿ
EndFragment