ಅಕ್ರಮವಾಗಿ ಅಕ್ಕಿ ಸಂಗ್ರಹಿಸಿದ್ದ ವ್ಯಕ್ತಿ ಬಂಧನ

RBK 91
Published on

ರಬಕವಿ/ಬನಹಟ್ಟಿ: ಹಪ್ಪಳ ಮಾಡುವ ನೆಪದಿಂದ ಸಾರ್ವಜನಿಕರಿಂದ ಅಕ್ರಮವಾಗಿ 1700 ಕೆಜಿ ಅಕ್ಕಿ ಸಂಗ್ರಹಿಸಿದ್ದ ವ್ಯಕ್ತಿಯನ್ನು ಗುರುವಾರ ಬನಹಟ್ಟಿ ಪೊಲೀಸರು ಬಂಧಿಸಿದರು. ಇಮಾಮಸಾಬ ನಬಿಸಾಬ ಗುರ್ಲಹೊಸೂರ ತನ್ನ ವೈಯಕ್ತಿಕ ಲಾಭಕ್ಕಾಗಿ ಯಾವುದೇ ದಾಖಲೆಗಳಿಲ್ಲದೆ ಸಾರ್ವಜನಿಕರಿಂದ 37 ಚೀಲಗಳಲ್ಲಿ ಸಂಗ್ರಹಿಸಿದ್ದ ಅಕ್ಕಿ ಹಾಗೂ ಆತನನ್ನು ಬನಹಟ್ಟಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಬನಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ರವಿಕುಮಾರ ದರಮಟ್ಟಿ ತನಿಖೆ ನಡೆಸಿದ್ದಾರೆ. ಎಎಸ್‌ಐ ಐ. ಬಿ. ಮಠಪತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net