ಶಾಲೆಗಳಲ್ಲಿ ವಸತಿ ಸೌಲಭ್ಯ

RBK 15-2
Published on

ರಬಕವಿ/ಬನಹಟ್ಟಿ: ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ಒಟ್ಟು 123 ಮನೆಗಳಿಗೆ ಹಾನಿಯಾಗಿದೆ. ನಾವಲಗಿ ಗ್ರಾಮವೊಂದರಲ್ಲಿಯೇ 25ಕ್ಕೂ ಅಧಿಕ ಮನೆಗಳು ಕುಸಿದು ಬಿದ್ದಿವೆ.

ನಾವಲಗಿ ಗ್ರಾಮದಲ್ಲಿ ಗ್ರಾಪಂ ಪಿಡಿಒ ಎಸ್.ವಿ. ಮಠದ ಹಾಗೂ ಗ್ರಾಮ ಲೆಕ್ಕಾಧಿಕಾರಿ ವಿಠ್ಠಲ ಕುಗಟಿ ಇತರರು ಬಿದ್ದ ಮನೆಗಳ ಪರಿಶೀಲನೆ ನಡೆಸಿ ಕುಟುಂಬಸ್ಥರಿಗೆ ಧೈರ್ಯ ಹೇಳಿದ್ದು ಶಾಲೆಗಳಲ್ಲಿ ವಸತಿ ಸೌಲಭ್ಯ ಒದಗಿಸಿದ್ದಾರೆ.

ತಾಲೂಕಿನಾದ್ಯಂತ ವಾಣಿಜ್ಯ ಬೆಳೆಗಳಾದ ಕಬ್ಬು, ಅರಿಶಿಣ ಸೇರಿ ಇತರ ಬೆಳೆ ಹಾನಿಯಾಗಿದೆ. ಉಳುಮೆ ಮತ್ತು ನಾಟಿ ಕಾರ್ಯಕ್ಕೂ ಮಳೆ ಅಡ್ಡಿಯುಂಟಾಗಿದೆ. ಅಂದಾಜು 10 ಲಕ್ಷ ರೂ. ಮೌಲ್ಯದ ಬೆಳೆ, ಮನೆ, ಜನ-ಜಾನುವಾರು ಹಾನಿಯಾಗಿದೆ ಎಂದು ತಹಸೀಲ್ದಾರ್ ಪ್ರಶಾಂತ ಚನಗೊಂಡ ತಿಳಿಸಿದ್ದಾರೆ.

ತಾಲೂಕಿನ ಕಾಲತಿಪ್ಪಿಯಲ್ಲಿ 2, ಕೆಸರಗೊಪ್ಪ-7, ಮದಭಾವಿ-1, ಗೋಲಬಾವಿ 2, ಹಳಿಂಗಳಿ-6, ತೇರದಾಳ-7, ಸಸಾಲಟ್ಟಿ-3, ಕುಲಹಳ್ಳಿ-18, ಬಂಡಿಗಣಿ-4, ಜಗದಾಳ-16, ಚಿಮ್ಮಡ-6, ಯಲ್ಲಟ್ಟಿ-2, ನಾವಲಗಿ-12, ಹಿಪ್ಪರಗಿ-9, ಮಹಾಲಿಂಗಪುರ-13, ಹನಗಂಡಿ-3, ಮಾರಾಪುರ-3, ಸಂಗಾನಟ್ಟಿ-4, ತಮದಡ್ಡಿ-4, ಬಿಸನಾಳ-1 ಸೇರಿ ಒಟ್ಟು 123 ಮನೆಗಳಿಗೆ ಹಾನಿಯಾಗಿದೆ ಎಂದು ತಾಲೂಕಾಡಳಿತ ತಿಳಿಸಿದೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net