ರೈಲಿಗೆ ತಲೆ ಕೊಟ್ಟು ವ್ಯಕ್ತಿ ಆತ್ಮಹತ್ಯೆ

BKT 8-1
Published on

ರಬಕವಿ/ಬನಹಟ್ಟಿ: ಮನೆಯಲ್ಲಿ ಜಗಳವಾಡಿ ತೆರಳಿದ ವ್ಯಕ್ತಿಯೋರ್ವನ ಸಾವಿನ ಸುದ್ದಿ ಮೂರು ದಿನಗಳ ನಂತರ ದಿನಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದನ್ನು ಅರಿತು ಶನಿವಾರ ಕುಟುಂಬಸ್ಥರು ಅಂತ್ಯ ಸಂಸ್ಕಾರ ಮಾಡಿದ್ದಾರೆ.

ನ.4 ರಂದು ಮಧ್ಯಾಹ್ನ 12 ಗಂಟೆ ವೇಳೆಗೆ ಬನಹಟ್ಟಿ ಮನೆಯಲ್ಲಿ ಜಗಳವಾಡಿದ ರವಿ ಮಹಾದೇವಪ್ಪ ಆದಗೊಂಡ (50) ಸಿಟ್ಟಿನಿಂದ ತೇರದಾಳ ಮಾರ್ಗವಾಗಿ ರಾಯಬಾಗ ಪಟ್ಟಣದತ್ತ ತೆರಳಿದ್ದಾನೆ. ಅದೇ ದಿನ 2 ಗಂಟೆ ವೇಳೆಗೆ ರಾಯಬಾಗ ಹತ್ತಿರದ ನಾಗರಾಳ ಕ್ರಾಸ್‌ಗೆ ಹೊಂದಿಕೊಂಡಂತಿರುವ ರೈಲ್ವೆ ಹಳಿ ಮೇಲೆ ಮಲಗಿ ಗೂಡ್ಸ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಬೆಳಗಾವಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಶನಿವಾರ ಪೊಲೀಸರು ಅಂತ್ಯಕ್ರಿಯೆ ನಡೆಸುವ ಸಮಯದಲ್ಲೇ ಕುಟುಂಬಸ್ಥರು ಹಾಜರಾಗಿ ಶವ ಪರಿಶೀಲಿಸಿದರು. ನಂತರ ಕುಟುಂಬಸ್ಥರೇ ಅಂತ್ಯಸಂಸ್ಕಾರ ನಡೆಸಿದರೆಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net