ವಕೀಲರ ಸಂಘದ ಅಭಿವೃದ್ಧಿಗೆ ಶ್ರಮಿಸಿ

RBK-10-2
Published on

ರಬಕವಿ/ಬನಹಟ್ಟಿ: ಬನಹಟ್ಟಿಯ ವಕೀಲರ ಸಂಘದ ನೂತನ ಪದಾಧಿಕಾರಿಗಳು ಮುಂದಿನ ದಿನಗಳಲ್ಲಿ ವಕೀಲರ ಸಂಘದ ಅಭಿವೃದ್ಧಿಗಾಗಿ ಮತ್ತು ವಕೀಲರ ಏಳಿಗೆಗಾಗಿ ಶ್ರಮಿಸಬೇಕು ಎಂದು ರಾಜ್ಯ ವಕೀಲರ ಪರಿಷತ್ ಸದಸ್ಯ ಎಸ್.ಎಸ್. ಮಿಟ್ಟಲಕೋಡ ತಿಳಿಸಿದರು.

ರಬಕವಿ ಬನಹಟ್ಟಿ ತಾಲೂಕಿನ ವಕೀಲರ ಸಂಘದ ಕಾರ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನೂತನ ಪದಾಧಿಕಾರಿಗಳ ಅಧಿಕಾರ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

ವಕೀಲರಲ್ಲಿ ಸಹೋದರ ಭಾವನೆ ಮುಖ್ಯವಾಗಿದೆ. ಚುನಾವಣೆಯಲ್ಲಿನ ಕಹಿ ಘಟನೆಗಳನ್ನು ಮರೆತು ಒಂದಾಗಿ ಸೇವೆ ಸಲ್ಲಿಸಬೇಕು. ನ್ಯಾಯಾಧೀಶರ ಮತ್ತು ವಕೀಲರ ಪರಸ್ಪರ ಸಹಕಾರದಿಂದ ಮಾತ್ರ ಕಕ್ಷಿದಾರರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

ನೂತನ ಅಧ್ಯಕ್ಷ ಶ್ರೀಕಾಂತ ಕುಲಕರ್ಣಿ, ಉಪಾಧ್ಯಕ್ಷ ರಾಜಕುಮಾರ ಗೂಗಾಡ, ಕಾರ್ಯದರ್ಶಿ ಮುಕುಂದ ಕೋಪರ್ಡೆ, ಸಹ ಕಾರ್ಯದರ್ಶಿ ದುಶ್ಯಾಸನ ಬೊಳಗೊಂಡ, ಖಜಾಂಚಿ ಶಿವಲಿಂಗ ಸಲಬನ್ನವರ ಅವರಿಗೆ ಪ್ರತಿಜ್ಞಾವಿಧಿಯನ್ನು ಚುನಾವಣಾಧಿಕಾರಿ ಮತ್ತು ವಕೀಲ ಕೆ.ಡಿ. ತುಬಚಿ ಬೋಧಿಸಿದರು.

ನ್ಯಾಯಾಧೀಶರಾದ ರೇಶ್ಮಾ ಗೋಣಿ, ಮಹೇಶ ಚಂದ್ರಕಾಂತ, ಎಂ.ಜಿ. ಕೆರೂರ, ಈಶ್ವರಚಂದ್ರ ಭೂತಿ ಮಾತನಾಡಿದರು. ಬಿ.ಎನ್. ಸತ್ತಿಕರ, ಅರವಿಂದ ವ್ಯಾಸ, ಕೆ.ಜಿ. ಸಾಲ್ಗಡೆ, ಜಿ.ಎಸ್. ಅಮ್ಮಣಗಿಮಠ, ರಾಜು ಕೀರಪುರ, ಕಿರಣ ದೇಸಾಯಿ, ಬಸವರಾಜ ಗುರುವ, ರಾಜಕುಮಾರ ಕಾಮಗೊಂಡ, ಸುರೇಶ ಗೊಳಸಂಗಿ, ಎಂ.ಆರ್.ಕಂಪು, ಬಸು ನಾಯಕ ಇದ್ದರು. ರವಿ ಸಂಪಗಾವಿ ಸ್ವಾಗತಿಸಿದರು. ಎ. ಎನ್. ಜಿಡ್ಡಿಮನಿ ನಿರೂಪಿಸಿದರು. ಚನ್ನು ಮಾಲಾಪುರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net