ಸಿದ್ದು ಸವದಿ ಬಂಧನಕ್ಕೆ ಸರ್ಕಾರ ಹಿಂದೇಟು

DKS 4 may 20
Published on

ರಬಕವಿ/ಬನಹಟ್ಟಿ: ಮಹಾಲಿಂಗಪುರದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಸಂದರ್ಭ ಗರ್ಭಿಣಿ ಮೇಲೆ ದೌರ್ಜನ್ಯ ಹಾಗೂ ಗರ್ಭಪಾತವಾಗುವಲ್ಲಿ ಕಾರಣವಾದ ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಅವರ ಬಂಧನ ಮಾಡುವಲ್ಲಿ ಸರ್ಕಾರ ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ಕೂಡಲೇ ಬಂಧನವಾಗಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಸರ್ಕಾರದ ವಿರುದ್ಧ ಕಿಡಿಕಾರಿದರು.

ಘಟನೆಗೆ ಸಂಬಂಧ ಚಾಂದನಿ ನಾಯಕ ಅವರ ಪತಿಯನ್ನು ಹೆದರಿಸಿ ತಮ್ಮ ಪರ ಹೇಳಿಕೆ ನೀಡುವಂತೆ ಬಿಜೆಪಿ ನಾಯಕರು ಒತ್ತಡ ಹೇರಿದ್ದಲ್ಲದೆ ಗುತ್ತಿಗೆದಾರನಾಗಿದ್ದು, ನಿನ್ನ ಯಾವುದೇ ಬಿಲ್ ಹಣವನ್ನು ನೀಡುವುದಿಲ್ಲವೆಂದು ಬಿಜೆಪಿಯವರು ಬೆದರಿಕೆಯೊಡಿದ್ದಾರೆ ಎಂದು ಬೆಳಗಾವಿಯಿಂದ ಬನಹಟ್ಟಿಗೆ ಹೆಲಿಪ್ಯಾಡ್ ಮೂಲಕ ಶನಿವಾರ ಆಗಮಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಮಾಜಿ ಸಚಿವೆ ಉಮಾಶ್ರೀ, ಕೆಪಿಸಿಸಿ ಕಮಿಟಿಯ ತೇರದಾಳ ಮತಕ್ಷೇತ್ರದ ಆರೋಗ್ಯ ಹಸ್ತ ಕಾರ್ಯಕ್ರಮದ ಮುಖ್ಯ ಕಾರ್ಯನಿರ್ವಾಕ ಡಾ. ಪದ್ಮಜೀತನಾಡಗೌಡ ಪಾಟೀಲ ಹಾಗೂ ಅನೇಕರಿದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net