

ರಬಕವಿ/ಬನಹಟ್ಟಿ: ಭಾರತ ಗ್ಯಾಸ್ ವಿತರಣೆ ನಿರತ ಸಿಬ್ಬಂದಿ ಯಾವುದೇ ಕಾರಣಕ್ಕೂ ಹೆದರಬಾರದು ಎಂದು ಧಾರವಾಡ ವಲಯ ವ್ಯವಸ್ಥಾಪಕ ಧೀರಜ ಕುಮಾರ ಶಾಹು ಹೇಳಿದರು.
ಸೋಮಶೇಖರ ಕೊಟ್ರಶೆಟ್ಟಿ ಅವರ ನೇತೃತ್ವದಲ್ಲಿನ ರಬಕವಿ-ಬನಹಟ್ಟಿ ಭಾರತ ಗ್ಯಾಸ್ ವಿತರಣಾ ಕೇಂದ್ರದ ಭಾರತ ಪೆಟ್ರೋಲಿಯಂ ಕಾರ್ಪೊರೇಷನ್ ವತಿಯಿಂದ ಎಕ್ಸ್- ಗ್ರೇಷಿಯ ವಿಮೆ ಯೋಜನೆ ಹಣವನ್ನು ಕೋವಿಡ್-19 ಸೋಂಕಿನಿಂದ ಇತ್ತೀಚೆಗೆ ನಿಧನರಾದ ರಬಕವಿ ಭಾರತ ಗ್ಯಾಸ್ ವಿತರಕ ಕೇಂದ್ರದಲ್ಲಿನ ನೌಕರ ಬ್ರಹ್ಮಾನಂದ ಕೋಪರ್ಡೆ ಅವರ ಪತ್ನಿ ಲಕ್ಷ್ಮೀ ಕೋಪರ್ಡೆ ಅವರಿಗೆ ಶನಿವಾರ 5 ಲಕ್ಷ ರೂ. ಮೊತ್ತದ ಚೆಕ್ ವಿತರಿಸಿ ಮಾತನಾಡಿದರು.
ಧಾರವಾಡ ವಲಯ ವಿತರಕರ ಸಂಘದ ಅಧ್ಯಕ್ಷ ವಿಜಯ ನಾಯ್ಕ, ಕಾರವಾರ ಕಾರ್ಯದರ್ಶಿ ನಾಗರಾಜ್ ವೆಂಕಟಾಪುರ, ದೇವದುರ್ಗ ವಿತರಕರು ಸೇರಿ 2 ಲಕ್ಷ ರೂಪಾಯಿ ಹಾಗೂ ಸ್ಥಳೀಯ ವಿತರಕರಾದ ಸೋಮಶೇಖರ ಕೊಟ್ರಶೆಟ್ಟಿ ಅವರು ಪ್ರತ್ಯೇಕವಾಗಿ ಎರಡು ಲಕ್ಷ ರೂ. ಧನ ಸಹಾಯ ಮಾಡಿದರು.
ಬೆಳಗಾವಿ ವಿಭಾಗದ ಅಧಿಕಾರಿ ಶಾಶ್ವತ ಶರ್ಮಾ, ಧಾರವಾಡ ವಿಭಾಗದ ಅಧಿಕಾರಿ ಬಿಫಿನ್ ನಾರ್ಂಡಿಸ್ ಮಾತನಾಡಿದರು. ಜಮಖಂಡಿ, ಮುಧೋಳ, ಬಾದಾಮಿ ಹಾಗೂ ಕಾರವಾರ, ದೇವದುರ್ಗದಿಂದ ವಿತರಕರು ಆಗಮಿಸಿದ್ದರು.
EndFragment