ಅಕ್ಷಯ ತೃತೀಯ ನಂತರ ದೇಶದಲ್ಲಿ ಕರೊನಾ ಮಾಯ

RBK-20-2
Published on

ರಬಕವಿ/ಬನಹಟ್ಟಿ: ಭಾರತ ಮಾತೆಯ ಪವಿತ್ರ ಭೂಮಿ ಮೇಲೆ ಯಾವುದೇ ರೋಗಗಳು ಶಾಶ್ವತವಾಗಿರಲು ಸಾಧ್ಯವಿಲ್ಲ. ಅಕ್ಷಯ ತೃತೀಯ ನಂತರ ದೇಶದಲ್ಲಿ ಕರೊನಾ ಸೋಂಕು ಹೇಳಹೆಸರಿಲ್ಲದೇ ಹೋಗುತ್ತದೆ ಎಂದು ಜೈನ ಮುನಿ ಕುಲರತ್ನ ಭೂಷಣ ಮಹಾರಾಜರು ಭವಿಷ್ಯ ನುಡಿದಿದ್ದಾರೆ.

ಗುರುವಾರ ಸಂಜೆ ಸಮೀಪದ ಭದ್ರಗಿರಿ ಬೆಟ್ಟದಲ್ಲಿ ನಡೆದ ಪ್ರವಚನ ಸಮಾರಂಭದಲ್ಲಿ ಕರೊನಾ ತಡೆಗಟ್ಟಲು ಜಾಗೃತಿ ನೀಡಿ ಅವರು ಮಾತನಾಡಿದರು.

ಭಾರತ ಆಯುರ್ವೇದಿಕ ಸಂಸ್ಕೃತಿ ಇರುವ ಭೂಮಿ. ಕರೊನಾ ವೈರಸ್‌ಗೆ ಯಾರೂ ಹೆದರಬೇಕಾಗಿಲ್ಲ. ಭಾರತ ಅನೇಕ ಸಾಧು-ಸಂತರು ನಡೆದಾಡಿದ ಪುಣ್ಯಭೂಮಿ ಇದಾಗಿರುವುದರಿಂದ ಅಷ್ಟೇನು ದೊಡ್ಡ ಪ್ರಮಾಣದಲ್ಲಿ ಜೀವಹಾನಿಯಾಗುವುದಿಲ್ಲ. ಆದರೂ ಮುಂಜಾಗ್ರತೆ ಕ್ರಮವಾಗಿ ಸರ್ಕಾರ ಕೈಗೊಂಡ ಎಲ್ಲ ಕ್ರಮಗಳನ್ನು ಸಾರ್ವಜನಿಕರು ತಪ್ಪದೇ ಪಾಲಿಸಬೇಕು. ಜನರ ಒಳಿತಿಗಾಗಿ ಮಾಡಿದ ಕಾನೂನುಗಳನ್ನು ತಾವೆಲ್ಲರೂ ಪಾಲಿಸಿ ಆರೋಗ್ಯದ ಜೀವನ ಸಾಗಿಸಬೇಕು ಎಂದರು.

ತುಳಸಿ, ಅಮೃತ ಬಳ್ಳಿ ಎಲೆಗಳು ಹಾಗೂ ಗುಣಮಟ್ಟದ ಅರಿಶಿಣ ಕುದಿಸಿ ಸೋಸಿದ ಕಷಾಯ ಕುಡಿಯುವುದರಿಂದ ಯಾವುದೇ ಸೋಂಕು ತಗುಲುವುದಿಲ್ಲ ಎಂದು ಮನಿಗಳು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net