ಕೈ ಮುಗಿಯುವೆ ಮನೆಯಲ್ಲಿರಿ

RBK NEWS 31-1
Published on

ರಬಕವಿ/ಬನಹಟ್ಟಿ: ಕರೊನಾ ವಿಕೋಪಕ್ಕೆ ದೇಶವೇ ತತ್ತರಿಸಿ ಹೋಗಿದ್ದು, ಈ ವೈರಸ್ ರಾಜ್ಯದಲ್ಲಿ 3ನೇ ಹಂತ ತಲುಪುವ ಲಕ್ಷಣಗಳು ಗೋಚರಿಸುತ್ತಿವೆ. ಎಲ್ಲರಲ್ಲಿಯೂ ಕೈ ಮುಗಿದು ಬೇಡಿಕೊಳ್ಳುವೆ ಮನೆಯಲ್ಲಿದ್ದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಆದೇಶ ಕಟ್ಟುನಿಟ್ಟಾಗಿ ಪಾಲಿಸಿ ಎಂದು ತೇರದಾಳ ಶಾಸಕ ಸಿದ್ದು ಸವದಿ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ತಾಲೂಕು ಕಚೇರಿಯಲ್ಲಿ ಸೋಮವಾರ ಸಂಜೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ದೈನಂದಿನ ವಸ್ತುಗಳು, ಕಿರಾಣಿ ಹಾಗೂ ತರಕಾರಿಗಳು ನಿರಂತರವಾಗಿ ನಿರಾಯಾಸವಾಗಿ ದೊರೆಯುತ್ತವೆ. ಬೆಳಗ್ಗೆ 6 ಗಂಟೆಯಿಂದ 12 ಗಂಟೆವರೆಗೆ ಮನೆಯಿಂದ ಒಬ್ಬರೇ ಹೊರ ಬಂದು ತಮ್ಮ ನಿತ್ಯ ವಸ್ತುಗಳನ್ನು ಪಡೆದುಕೊಂಡು ಮನೆಯಲ್ಲಿಯೇ ಇರಿ. ನಿರ್ಲಕ್ಷಿೃಸಿದ್ದಲ್ಲಿ ಮುಂದಿನ ದಿನಗಳು ಭಯಂಕರ ಹಾಗೂ ಭಯಾನಕ ದಿನಗಳಾಗಿವೆ ಎಂದರು.

ಮನೆಯಲ್ಲಿರುವುದೊಂದು ದೇಶ ಸೇವೆಯೆಂದು ತಿಳಿಯಿರಿ. ಇಲ್ಲವಾದಲ್ಲಿ ರಾಜ್ಯ ಸರ್ಕಾರ ತಕ್ಷಣವೇ ಅರೆಮಿಲಿಟರಿ ಪಡೆಗಳನ್ನು ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ನಿಯೋಜನೆ ಮಾಡುವ ಲಕ್ಷಣಗಳಿವೆ. ಅದಕ್ಕೆ ಅವಕಾಶ ನೀಡದೆ ಪ್ರಾಮಾಣಿಕತೆ ಮೆರೆಯಬೇಕೆಂದು ಮನವಿ ಮಾಡಿದರು. ತಹಸೀಲ್ದಾರ್ ಪ್ರಶಾಂತ ಚನಗೊಂಡ, ಸಿಪಿಐ ಜೆ. ಕರುಣೇಶಗೌಡ, ಪೌರಾಯುಕ್ತ ಶ್ರೀನಿವಾಸ ಜಾಧವ ಇದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net