

ರಬಕವಿ/ಬನಹಟ್ಟಿ: ಕರೊನಾ 2ನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಅತ್ಯಾಧುನಿಕ ಸೌಲಭ್ಯಗಳುಳ್ಳ ಕೋವಿಡ್ ಕೇರ್ ಸೆಂಟರ್(ಸಿಸಿಸಿ)ನ್ನು ರಬಕವಿ-ಮಹಾಲಿಂಗಪುರ ರಸ್ತೆಯಲ್ಲಿನ ಬಿಸಿಎಂ ಹಾಸ್ಟೆಲ್‌ನಲ್ಲಿ ಪ್ರಾರಂಭಿಸಲಾಗಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಹಾಸ್ಟೆಲ್‌ಗೆ ಶನಿವಾರ ಮಧ್ಯಾಹ್ನ ಭೇಟಿ ನೀಡಿ ಸಕಲ ವ್ಯವಸ್ಥೆಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಯಾವುದೇ ರೋಗ ಲಕ್ಷಣಗಳಿಲ್ಲದೆ ಇರುವ ಕೋವಿಡ್ ಸೋಂಕಿತರನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡುವ ಸಲುವಾಗಿ ನೂರಕ್ಕೂ ಅಧಿಕ ಹಾಸಿಗೆಯುಳ್ಳ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಪರಿಸ್ಥಿತಿ ವಿಷಮವಾದಲ್ಲಿ ಅಂಥವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಹೆಚ್ಚಿನ ನಿಗಾವಹಿಸಲಾಗುತ್ತದೆ ಎಂದರು.
ಮನೆಗಳಲ್ಲಿ ಅನುಕೂಲ ಹೊಂದಿದವರು ಪ್ರತ್ಯೇಕ ಕೊಠಡಿಯಲ್ಲಿ ವ್ಯವಸ್ಥೆ ಮಾಡಿಕೊಳ್ಳಬೇಕು. ಒಟ್ಟಾರೆ, ಸಮುದಾಯದಲ್ಲಿ ಹಬ್ಬದಂತೆ ಮುನ್ನೆಚ್ಚರಿಕೆಯಿಂದ ಚಿಕಿತ್ಸೆ ಪಡೆಯಬೇಕು ಎಂದರು.
ಸಹಾಯವಾಣಿಗೆ ಸಂಪರ್ಕಿಸಿ
ಕೋವಿಡ್ ಸಲುವಾಗಿ ರೋಗಿಗಳು ಪರದಾಡುವ ಅವಶ್ಯಕತೆಯಿಲ್ಲ. ಯಾರಿಗಾದರೂ ಸಹಾಯ ಬೇಕಾದಲ್ಲಿ ನನ್ನ ಮೊಬೈಲ್ ನಂಬರ್ 94481-23994ಗೆ ಅಥವಾ ತಹಸೀಲ್ದಾರ್ ಸಂಜಯ ಇಂಗಳೆ ಮೊ. 99007-76009, ವೈದ್ಯಾಧಿಕಾರಿ ಎಂ.ಎನ್. ನದ್ಾ ಮೊ. 95903-91672 ನಂಬರ್‌ಗೆ ಸಂಪರ್ಕಿಸಬಹುದಾಗಿದೆ ಎಂದು ಶಾಸಕ ಸವದಿ ತಿಳಿಸಿದರು.