ಮಾದರಿ ರಸ್ತೆಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ

RBK NEWS 18-1
Published on

ರಬಕವಿ/ಬನಹಟ್ಟಿ: ಕ್ಷೇತ್ರಾದ್ಯಂತ ಮಾದರಿ ರಸ್ತೆಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದರಿಂದ ಅಪಘಾತಗಳನ್ನು ತಡೆಯಲು ಅನುಕೂಲವಾಗುತ್ತದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.

ಸೋಮವಾರ ರಬಕವಿ ಪಟ್ಟಣದಲ್ಲಿ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಯ ಹಾಗೂ ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ ರಬಕವಿ-ತೇರದಾಳ ವಾಯಾ ಹಂಳಿಂಗಳಿ ಮಧ್ಯದ 30.58 ಲಕ್ಷ ರೂ. ವೆಚ್ಚದ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಸರ್ಕಾರ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಕ್ಷೇತ್ರಾದ್ಯಂತ ಉತ್ತಮ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ ಎಂದರು. ಧರೆಪ್ಪ ಉಳ್ಳಾಗಡ್ಡಿ, ಆನಂದ ಕಂಪು, ಸುರೇಶ ಅಕ್ಕಿವಾಟ, ಮಹಾದೇವ ಕೋಟ್ಯಾಳ, ಗಂಗಪ್ಪ ಉಳ್ಳಾಗಡ್ಡಿ, ಪಿ.ಜಿ. ಕಾಖಂಡಕಿ, ಶ್ರೀಕಾಂತ ವಾಗ್ಮೋರೆ, ಯೂನುಸ್ ಚೌಗಲೆ, ಮಹಾದೇವ ದೂಪದಾಳ, ಯಲ್ಲಪ್ಪ ಕಟಗಿ, ವಿಶ್ವನಾಥ ಸವದಿ, ಗಂಗಪ್ಪ ಹುಕ್ಕೇರಿ, ಸಿದ್ದ್ದಪ್ಪ ಇರಡಿ, ಸಿದ್ರಾಮ ಅವರಾದಿ, ಬಸು ಹರಿಜನ, ಬಾಬು ಕೆಳಗಿನಮನಿ ಇದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net