ಪ್ರಚಾರ ಕಾರ್ಯಕ್ಕೆ ಚಾಲನೆ

RBK 5-1
Published on

ರಬಕವಿ/ಬನಹಟ್ಟಿ: ತಾಲೂಕು ಹಾಗೂ ತೇರದಾಳ ಮತಕ್ಷೇತ್ರ ವ್ಯಾಪ್ತಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ವತಿಯಿಂದ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆಗಿಳಿದ ಶಾಸಕ ಸಿದ್ದು ಸವದಿ ಭಾನುವಾರ ಬನಹಟ್ಟಿಯ ಕಾಡಸಿದ್ಧೇಶ್ವರ ದೇವಸ್ಥಾನಕ್ಕೆ ಪತ್ನಿ ಮೀನಾಕ್ಷಿ ಸಮೇತರಾಗಿ ಕಾರ್ಯಕರ್ತರೊಂದಿಗೆ ಆಗಮಿಸಿ ಪೂಜೆ ಸಲ್ಲಿಸಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಒತ್ತಾಯದ ಮೇರೆಗೆ ಮತ್ತು ಅನಿವಾರ್ಯವಾಗಿ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ. ಈ ಭಾಗದ ರೈತರು ಮತ್ತು ನೇಕಾರರನ್ನು ಆರ್ಥಿಕವಾಗಿ ಸಬಲರಾಗಿಸಲು ಎಲ್ಲ ರೀತಿಯ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸವದಿ ಹೇಳಿದರು.

ನೇಕಾರರ ಸಹಕಾರಿ ಸಂಘಗಳ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಬಾಣಕಾರ ಸ್ಪರ್ಧಿಸಿದ್ದು ಅವರು ಕೂಡ ದೇವರ ದರ್ಶನ ಪಡೆದು ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದರು.

ಧರೆಪ್ಪ ಉಳ್ಳಾಗಡ್ಡಿ, ರಾಜು ಅಂಬಲಿ, ರಾಜು ಬಾಣಕಾರ, ಸುರೇಶ ಅಕ್ಕಿವಾಟ, ಸಂಜಯ ತೆಗ್ಗಿ, ಸಿದ್ದನಗೌಡ ಪಾಟೀಲ, ಸುರೇಶ ಚಿಂಡಕ, ಡಾ.ಪಿ.ವಿ. ಪಟ್ಟಣ, ಸಿದ್ರಾಮ ಸವದತ್ತಿ, ಕುಮಾರ ಕದಮ, ಬ್ರಿಜ್ಮೋಹನ ಡಾಗಾ, ಈರಣ್ಣ ಚಿಂಚಖಂಡಿ, ಲಕ್ಕಪ್ಪ ಪಾಟೀಲ, ಶ್ರೀಶೈಲ ಬೀಳಗಿ, ನಾರಾಯಣ ಮಾಲಪಾಣಿ, ಈಶ್ವರ ಬಿರಾದಾರಪಾಟೀಲ, ಯಲ್ಲಪ್ಪ ಕಟಗಿ, ಚಿದಾನಂದ ಹೊರಟ್ಟಿ, ಈಶ್ವರ ನಾಗರಾಳ, ಆನಂದ ಕಂಪು, ರವಿ ಕೊರ್ತಿ, ಅಶೋಕ ಹಳ್ಳೂರ, ಸದಾಶಿವ ಪರೀಟ, ರಮೇಶ ಮಂಡಿ, ಪ್ರವೀಣ ಕೋಲಾರ, ಶಂಕರ ಅಂಗಡಿ, ಶಂಕರ ಜಂಜಪ್ಪನವರ, ಭೀಮಶಿ ಪಾಟೀಲ, ರವಿಂದ್ರ ಕರಲಟ್ಟಿ, ಸವಿತಾ ಹೊಸೂರ, ಗೌರಿ ಮಿಳ್ಳಿ, ವೈಷ್ಣವಿ ಬಾಗೇವಾಡಿ, ಪವಿತ್ರಾ ತುಕ್ಕನ್ನವರ, ರತ್ನಾ ಕೊಳಕಿ, ಸುವರ್ಣಾ ಕೊಪ್ಪದ, ಶಾಂತಾ ಸೋರಗಾವಿ ಸೇರಿ ನೂರಾರು ಕಾರ್ಯಕರ್ತರು ಇದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net