ಬಾವಿಯಲ್ಲಿ ಬಿದ್ದಿದ್ದ ಆಕಳು ರಕ್ಷಣೆ

RBK 26-1
Published on

ರಬಕವಿ/ಬನಹಟ್ಟಿ: ತಾಲೂಕಿನ ಢವಳೇಶ್ವರ ಗ್ರಾಮದಲ್ಲಿ ಪಾಳು ಬಾವಿಗೆ ಕಾಲು ಜಾರಿ ಬಿದ್ದಿದ್ದ ಆಕಳು (ಜರ್ಸಿ) ವನ್ನು ಅಗ್ನಿಶಾಮಕ ದಳ ಸಿಬ್ಬಂದಿ ಜೀವಂತವಾಗಿ ಹೊರ ತೆಗೆಯುವಲ್ಲಿ ಮಂಗಳವಾರ ಯಶಸ್ವಿಯಾಗಿದ್ದಾರೆ.

ಢವಳೇಶ್ವರ ಗ್ರಾಮದ ಮಾನಿಂಗಪ್ಪ ಕಮತಗಿ ಎಂಬುವರ ಆಕಳು ಎರಡು ದಿನಗಳ ಹಿಂದೆ ಅವರ ತೋಟದಲ್ಲಿದ್ದ ಪಾಳು ಬಾವಿಯಲ್ಲಿ ಕಾಲು ಜಾರಿ ಬಿದ್ದಿತ್ತು. ಎರಡು ದಿನಗಳಿಂದ ಈ ಆಕಳನ್ನು ಹೊರತೆಗೆಯುವಲ್ಲಿ ಮಾಲೀಕ ಹರಸಾಹಸಪಟ್ಟಿದ್ದನು. ಮಂಗಳವಾರ ಬೆಳಗ್ಗೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ತಕ್ಷಣವೇ ಕಾರ್ಯಪ್ರವೃತವಾದ ಸಿಬ್ಬಂದಿ ಆಕಳನ್ನು ಜೀವವಂತವಾಗಿ ಹೊರ ತೆಗೆದಿದ್ದಾರೆ. ಅಗ್ನಿ ಶಾಮಕ ದಳದ ಜೆ.ಬಿ. ಕೊರವ, ಎಂ.ಎಸ್. ಹೂಗಾರ, ಎಸ್.ಜಿ. ಸಂದ್ರಿಮನಿ, ಎಂ.ಎಸ್. ಚೌಗಲಾ, ಜೆ.ಎಚ್. ಸೈಯದ್ ಕಾರ್ಯಾಚರಣೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net