ಶ್ರೀಶೈಲದತ್ತ ಮಲ್ಲಯ್ಯನ ಕಂಬಿಗಳು

RBK NEWS 11-1
Published on

ರಬಕವಿ/ಬನಹಟ್ಟಿ: ಬನಹಟ್ಟಿ ನಗರದ ಸೋಮವಾರ ಪೇಟೆ ದೈವ ಮಂಡಳಿ ಭಕ್ತರು ಹಾಗೂ ಮಂಡಳಿಯ ಮಲ್ಲಯ್ಯನ ಕಂಬಿಗಳು ಭಾನುವಾರ ರಾತ್ರಿ ಗಾಂಧಿ ವೃತ್ತದ ಬಳಿ ಮಂಗಳಾರುತಿಯೊಂದಿಗೆ ಆಂಧ್ರದ ಸುಕ್ಷೇತ್ರ ಶ್ರೀಶೈಲಕ್ಕೆ ಪಾದಯಾತ್ರೆ ಮೂಲಕ ತೆರಳಿದವು.

14 ದಿನ ಪಾದಯಾತ್ರೆ ಮೂಲಕ ತೆರಳಿ ಮಾ.25 ರಂದು ನಡೆಯಲಿರುವ ಯುಗಾದಿ ಹಬ್ಬದ ನಿಮಿತ್ತ ಜಾತ್ರೆಯಲ್ಲಿ ಪಾಲ್ಗೊಳ್ಳುವರು. ಪಾದಯಾತ್ರೆಯ ನೇತೃತ್ವವನ್ನು ರಾಚಯ್ಯಸ್ವಾಮಿ ಮಠಪತಿ, ಬಾಳಯ್ಯ ಸ್ವಾಮಿ, ಸಿದ್ದು ಬೀಳಗಿ ವಹಿಸಿದ್ದಾರೆ. ದೇವರಿಗೆ ಯಾವುದೇ ಜಾತಿ ಮಿತಿಯಿಲ್ಲವೆಂಬುದಕ್ಕೆ ಮತ್ತೊಮ್ಮೆ ಸಾಕ್ಷಿಯಾಗಿ ಹಲವಾರು ಮುಸ್ಲಿಮರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಸ್ಪರ್ಶಲಿಂಗ ದರ್ಶನವಿಲ್ಲ
ಪ್ರಸಕ್ತ ವರ್ಷ ಮಾ.25 ರಂದು ಸುಕ್ಷೇತ್ರ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಯುಗಾದಿ ಆಚರಣೆ ನಡೆಯಲಿದೆ ಎಂದು ದೇವಸ್ಥಾನ ಟ್ರಸ್ಟ್ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್. ರಾಮರಾವ್ ತಿಳಿಸಿದ್ದಾರೆ.

ಯುಗಾದಿ ಪ್ರಯುಕ್ತ ಲಕ್ಷಾಂತರ ಭಕ್ತರು ಮಲ್ಲಯ್ಯನ ದರ್ಶನಕ್ಕಾಗಿ ಆಗಮಿಸುವ ಹಿನ್ನೆಲೆ ಮಾ. 23, 24 ಮತ್ತು 25 ರವರೆಗೆ ಮಲ್ಲಿಕಾರ್ಜುನ ದೇವರ ಸ್ಪರ್ಶಲಿಂಗ ದರ್ಶನವನ್ನು ನಿಷೇಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿದ್ದಾರೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net