ಮಹಿಳಾ ಶಕ್ತಿ ವರ್ಧನೆಗೆ ನಾರಿಯರೆಲ್ಲ ಸಂಘಟಿತರಾಗಲಿ

BJP
Published on

ರಂಗ ಕಲಾವಿದೆ ಸಂಧ್ಯಾ ಶೆಣೈ ಕರೆ

ರಾಣಿ ಅಬ್ಬಕ್ಕಳ ಛದ್ಮವೇಷ ಸ್ಪರ್ಧೆ ಉದ್ಘಾಟನೆ

* ಮೋದಿ ಜನ್ಮದಿನದ ನಿಮಿತ್ತ ಸೇವಾ ಪಾಕ್ಷಿಕ ಕಾರ್ಯಕ್ರಮ

ವಿಜಯವಾಣಿ ಸುದ್ದಿಜಾಲ ಉಡುಪಿ

ಸ್ವಾತಂತ್ರ್ಯಕ್ಕಾಗಿ ಹಾಗೂ ತನ್ನ ರಾಜ್ಯ ರಕ್ಷಣೆಗಾಗಿ ಹೋರಾಡುತ್ತಿದ್ದ ರಾಣಿ ಅಬ್ಬಕ್ಕಳ ಶಕ್ತಿ ಕುಂದಿಸಲು ಪೋರ್ಚುಗೀಸರು ಪತಿಯೇ ಅವಳಿಗೆ ಶತ್ರು ಆಗುವಂತೆ ಹುನ್ನಾರ ಮಾಡಿದ್ದು ಇತಿಹಾಸದಿಂದ ತಿಳಿದುಬರುತ್ತದೆ. ಇಂದಿಗೂ ಸಹ ಸಾಮಾಜಿಕವಾಗಿ ಮಹಿಳಾ ಶಕ್ತಿ ಹಿಮ್ಮೆಟ್ಟಿಸುವ ಕಾರ್ಯ ಆಗುತ್ತಿದೆ. ಹೀಗಾಗಿ ಮಹಿಳೆಯರೆಲ್ಲ ಸಂಘಟಿತರಾಗಬೇಕಾದ ಅನಿವಾರ್ಯತೆ ಇದೆ ಎಂದು ಜಿಲ್ಲಾ ಬಿಜೆಪಿಯ ಹಿರಿಯ ಕಾರ್ಯಕರ್ತೆ, ರಂಗ ಕಲಾವಿದೆ ಹಾಗೂ ಹಾಸ್ಯನಟಿ ಸಂಧ್ಯಾ ಶೆಣೈ ಕರೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮದಿನದ ನಿಮಿತ್ತ ದೇಶಾದ್ಯಂತ ನಡೆಯುತ್ತಿರುವ ಸೇವಾ ಪಾಕ್ಷಿಕ ಕಾರ್ಯಕ್ರಮದ ಭಾಗವಾಗಿ ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಮಹಿಳಾ ಮೋರ್ಚಾದ ವತಿಯಿಂದ ಸೆಪ್ಟೆಂಬರ್​ 20ರಂದು ಆಯೋಜಿಸಿದ್ದ ಭಾರತದ ಸ್ವಾತಂತ್ರ್ಯದ ಪ್ರಥಮ ಮಹಿಳಾ ಹೋರಾಟಗಾರ್ತಿ ಉಳ್ಳಾಲದ ರಾಣಿ ಅಬ್ಬಕ್ಕದೇವಿ 500ನೇ ಜಯಂತಿ ಸ್ಮರಣಾರ್ಥ ಮಹಿಳೆಯರಿಗೆ ಆಯೋಜಿಸಿದ್ದ ರಾಣಿ ಅಬ್ಬಕ್ಕಳ ಛದ್ಮವೇಷ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಹಿರಿಯ ಕಾರ್ಯಕರ್ತೆಯರಾದ ಸಾವಿತ್ರಮ್ಮ, ವಸಂತಿ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಸುವರ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಳಿನಿ ಪ್ರದೀಪ ಉಪಸ್ಥಿತರಿದ್ದರು.

ಸುಜಲಾ ಸುವರ್ಣ ಪ್ರಾರ್ಥಿಸಿದರು. ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸಂಧ್ಯಾ ರಮೇಶ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ನಿರ್ಮಲಾ ಶೆಟ್ಟಿ ವಂದಿಸಿದರು. ಜಿಲ್ಲಾ ಮಹಿಳಾ ಮೋರ್ಚಾ ಪದಾಧಿಕಾರಿಗಳಾದ ಕವಿತಾ ಹರೀಶ, ನಾಗವೇಣಿ, ದಯಾಶಿನಿ, ಸುಮಾ ಪೆರಂಪಳ್ಳಿ ಇತರರು ಸಹಕರಿಸಿದರು. ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಪವಿತ್ರಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net