ವಿದ್ಯಾರ್ಥಿಗಳಿಗೆ ರಾಮಾನುಜನ್ ಪ್ರೇರಣೆ

mahesh college
Published on

ಹುಬ್ಬಳ್ಳಿ: ವಿದ್ಯಾರ್ಥಿಗಳು ಗಣಿತ ತಜ್ಞ ಶ್ರೀನಿವಾಸ ರಾಮಾನುಜನ್ ಅಯ್ಯಂಗಾರ ಅವರಂಥ ಮಹಾನ್ ವ್ಯಕ್ತಿಗಳನ್ನು ಪ್ರೇರಣೆಯನ್ನಾಗಿಟ್ಟುಕೊಂಡು ಮುನ್ನಡೆಯಬೇಕು. ಜತೆಗೆ ಸಂಶೋಧನಾತ್ಮಕ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಡಾ. ಆರ್.ಬಿ. ಪಾಟೀಲ ಮಹೇಶ ಪಿಯು ಕಾಲೇಜಿನ ಪ್ರಾಚಾರ್ಯ ರಾಮಮೋಹನ ಎಚ್.ಕೆ. ಕರೆ ನೀಡಿದರು.

ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಗಣಿತ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗಣಿತ ಉಪನ್ಯಾಸಕ ಮಹೇಶ ಮಾಳಿ ಮಾತನಾಡಿ, ಸಂಖ್ಯೆ ಹಾಗೂ ಸಮೀಕರಣಗಳೊಂದಿಗೆ ಬಿಡುವಿನ ವೇಳೆಯಲ್ಲಿ ಶ್ರೀನಿವಾಸ ರಾಮಾನುಜನ್ ಆಟವಾಡುತ್ತಿದ್ದರು. ಬಡತನದಲ್ಲಿ ಬೆಳೆದ ರಾಮಾನುಜನ್ ಅವರಿಗೆ ಗಣಿತದ ಸಂಶೋಧನೆಯನ್ನು ಬರೆದಿಡಲು ಲೇಖನಿ ಮತ್ತು ಕಾಗದವೂ ಕೂಡ ಲಭ್ಯವಿರಲಿಲ್ಲ. ಬದುಕಿದ್ದು ಕೇವಲ 32 ವರ್ಷವಾದರೂ ಗಣಿತ ಶಾಸ್ತ್ರಕ್ಕೆ ಸಂಖ್ಯೆಯ ಸಿದ್ದಾಂತ, ವಿಶ್ಲೇಷಣೆ ಮತ್ತು ಅನಂತ ಸರಣಿಯ ಫಲಿತಾಂಶಗಳನ್ನು ಒಳಗೊಂಡಂತೆ ಗಣನೀಯ ಕೊಡುಗೆಗಳನ್ನು ನೀಡಿ ವಿಶ್ವದಲ್ಲಿಯೇ ಭಾರತವನ್ನು ಗಣಿತ ಕ್ಷೇತ್ರದಲ್ಲಿ ಉತ್ತುಂಗದ ಸ್ಥಾನ ಕಲ್ಪಿಸಿದ ಕೀರ್ತಿ ಸಲ್ಲುತ್ತದೆ ಎಂದರು.

ಗಣಿತ ವಿಭಾಗದ ಮುಖ್ಯಸ್ಥ ಪ್ರದೀಪ ಅಗಸಿಮನಿ, ಪ್ರೊ. ದುಂಡಪ್ಪ ಕುಲಕರ್ಣಿ, ಪ್ರೊ. ಬಸನಗೌಡ ಪಾಟೀಲ, ಪ್ರೊ. ವಿರೇಶ ಶಿವಣಗಿ, ಪ್ರೊ. ವಿಶಾಲಮತಿ ಭಂಡಿವಾಡ ಉಪಸ್ಥಿತರಿದ್ದರು.

ಶ್ರೀನಿವಾಸ ರಾಮಾನುಜನ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net