ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ರಾಖಿ ಖರೀದಿ ಭರಾಟೆ

28GDG03
Published on

ಶಾಲಾ-ಕಾಲೇಜು ವಿದ್ಯಾರ್ಥಿನಿಯರು, ಯುವತಿಯರು, ಗೃಹಿಣಿಯರು ಸಹೋದರರಿಗೆ ಕಟ್ಟಲು ನಾನಾ ಬಗೆಯ ರಾಖಿ ಖರೀದಿಸುವಲ್ಲಿ ಮಗ್ನರಾಗಿದ್ದರು. ಅಕ್ಕ-ತಂಗಿಯರ ಒತ್ತಾಸೆಯಂತೆ ಹಲವು ಹುಡುಗರು ರಾಖಿ ಖರೀದಿಗೆ ಅವರೊಂದಿಗೆ ಸಾಥ್ ನೀಡುತ್ತಿದ್ದರು.

ನಾನಾ ರೀತಿಯ ರಾಖಿ: ನಗರದ ಟಾಂಗಾಕೂಟ, ಗ್ರೇನ್ ಮಾರುಕಟ್ಟೆ, ಜಗದ್ಗುರು ತೋಟದಾರ್ಯ ಮಠದ ಆವರಣ, ಬೆಟಗೇರಿ ಭಾಗ, ಜನತಾ ಬಜಾರ, ಹಾತಲಗೇರಿ ನಾಕಾ, ಸಿದ್ಧಲಿಂಗಾ ನಗರ, ಗಾಂ ವೃತ್ತ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ರಾಖಿ ವ್ಯಾಪಾರ ಜೋರಾಗಿತ್ತು. ಪ್ರಮುಖ ಸ್ಟೇಷನರಿ ಅಂಗಡಿ, ಲೇಡಿಸ್ ಕಾರ್ನರ್ ಸೇರಿದಂತೆ ಬೀದಿ ಬದಿ ತಳ್ಳುಗಾಡಿಗಳಲ್ಲೂ ಮಾರಾಟ ಭರ್ಜರಿಯಾಗಿತ್ತು. ಮಾಬುಸುಬಾನಿ ಕಟ್ಟೆ, ಜನತಾ ಬಜಾರ್, ಬ್ಯಾಂಕ್ ರಸ್ತೆ, ಸ್ಟೇಷನ್ ರಸ್ತೆ, ಮಹೇಂದ್ರಕರ್ ವೃತ್ತ, ಗಂಗಾಪುರ ಪೇಟೆ, ಬೆಟಗೇರಿ ತೆಂಗಿನಕಾಯಿ ಬಜಾರ್, ಹಾತಲಗೇರಿ ನಾಕಾ, ಮುಳಗುಂದ ನಾಕಾ, ಕೆ.ಸಿ. ರಾಣಿ ರಸ್ತೆ ಹಾಗೂ ವೆಂಕಟೇಶ ಚಿತ್ರಮಂದಿರ ರಸ್ತೆಯಲ್ಲಿ ವ್ಯಾಪರ ನಡೆಯುತ್ತಿದೆ. ಮಾರುಕಟ್ಟೆಗೆ ನಾನಾ ಬಗೆಯ ರಾಖಿಗಳು ಲಗ್ಗೆ ಇಟ್ಟಿವೆ. ಸ್ಟೋನ್, ಶ್ರೀರಕ್ಷಾ, ಶುಭ, ಕ್ರೇಜಿ, ತಾರಾ ಹಾಗೂ ಡೈಮಂಡ್ ಹೆಸರಿನ ರಾಖಿಗಳು ಎಲ್ಲರನ್ನು ಆಕರ್ಷಿಸುತ್ತಿವೆ. ತಲಾ ರಾಖಿಯೊಂದಕ್ಕೆ ಕನಿಷ್ಠ ೧೦ ರಿಂದ ಗರಿಷ್ಠ ೫೦೦ ರೂ.ಗಳವರೆಗೆ ಮಾರುಕಟ್ಟೆಯಲ್ಲಿ ದರ ಕಂಡುಬರುತ್ತಿದೆ.

ಸಿಹಿ, ಉಡುಗೊರೆ ಖರೀದಿ: ಸಹೋದರರ ಸಮೃದ್ಧಿ, ಸ್ವರಕ್ಷಣೆ ಕೋರಿ ರಾಖಿ ಕಟ್ಟುವ ಹೆಣ್ಣುಮಕ್ಕಳಿಗೆ ಅಣ್ಣ-ತಮ್ಮಂದಿರು ಉಡುಗೊರೆ ನೀಡುವುದು ಸಂಪ್ರದಾಯ. ರಾಖಿ ಕಟ್ಟುವ ವೇಳೆ ಪೂಜೆ ಸಲ್ಲಿಸಿ, ಸಿಹಿ ನೀಡುವುದು ಪದ್ಧತಿಯ ಒಂದು ಭಾಗವಾಗಿದೆ. ಹೀಗಾಗಿ ರಕ್ಷಾ ಬಂಧನ ಹಬ್ಬದ ಹಿನ್ನೆಲೆ ರಾಖಿಯೊಂದಿಗೆ ಸಿಹಿ, ವಿವಿಧ ಉಡುಗೊರೆಗಳ ಖರೀದಿ ಭರಾಟೆಯೂ ಜೋರಾಗಿತ್ತು. ಕೆಲವರು ಬೇಕರಿಗಳಲ್ಲಿ ಪೇಡೆ, ಲಡ್ಡು, ಜಾಮೂನು, ಜಿಲೆಬಿ ಖರೀದಿಯಲ್ಲಿ ಮುಳುಗಿದ್ದರು. ಇನ್ನೂ ಕೆಲವು ಗೃಹಿಣಿಯರು ಮನೆಯಲ್ಲೇ ಅಗತ್ಯ ಸಿಹಿ ತಯ್ಯಾರಿಸಲು ಸಿದ್ಧತೆ ನಡೆಸಿದ್ದರು.

ರಾಖಿ ಬೆಲೆ ಏರಿಕೆ:ವ್ಯಾಪಾರಿಗಳು ಬೆಂಗಳೂರು, ಕೋಲ್ಕತ್ತಾ, ಮುಂಬೈ, ಹುಬ್ಬಳ್ಳಿಯಿಂದ ಸುಮಾರು ಒಂದು ಲಕ್ಷದ ರೂಪಾಯಿ ಮೌಲ್ಯದ ರಾಖಿ ದಾಸ್ತಾನು ತರಿಸಿಕೊಂಡಿದ್ದಾರೆ. ಮಾರುಕಟ್ಟೆಗೆ ನಾನಾ ಬಗೆಯ ರಾಖಿಗಳು ಲಗ್ಗೆ ಇಟ್ಟಿವೆ. ಸ್ಟೋನ್, ಶ್ರೀರಕ್ಷಾ, ಶುಭ, ಕ್ರೇಜಿ, ತಾರಾ ಹಾಗೂ ಡೈಮಂಡ್ ಹೆಸರಿನ ರಾಖಿಗಳು ಎಲ್ಲರನ್ನು ಆಕರ್ಷಿಸುತ್ತಿವೆ. ತಲಾ ರಾಖಿಯೊಂದಕ್ಕೆ ಕನಿಷ್ಠ ೧೦ ರಿಂದ ಗರಿಷ್ಠ ೫೫೦ರೂ.ಗಳವರೆಗೆ ಮಾರುಕಟ್ಟೆಯಲ್ಲಿ ದರ ಕಂಡುಬರುತ್ತಿದೆ.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net