ಹುಬ್ಬಳ್ಳಿ: ವಿದ್ಯಾಧರೆ ಶೈಕ್ಷಣಿಕ ಸಾಂಸ್ಕೃತಿಕ ಟ್ರಸ್ಟ್ ಹಾಗೂ ರಾಮಕೃಷ್ಣ ವಿವೇಕಾನಂದ ಆಶ್ರಮದ ಆಶ್ರಯದಲ್ಲಿ ಪಂ. ಪಂಚಾಕ್ಷರಿ ಗವಾಯಿಗಳ ಪುಣ್ಯಸ್ಮರಣೋತ್ಸವದ ಅಂಗವಾಗಿ ಜು. 13ರಂದು ಸಂಜೆ 6.30ಕ್ಕೆ ರಾಗಧಾರೆ ಸರಣಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಲ್ಯಾಣನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಕಾರ್ಯಕ್ರಮ ನಡೆಯಲಿದೆ ಆಶ್ರಮದ ಅಧ್ಯಕ್ಷ ಶ್ರೀ ತೇಜಸಾನಂದಜೀ ಮಹಾರಾಜ ಸಾನ್ನಿಧ್ಯ ವಹಿಸುವರು. ಖ್ಯಾತ ನರರೋಗ ತಜ್ಞ ಡಾ. ಎಸ್.ಪಿ. ಬಳಿಗಾರ ಉದ್ಘಾಟಿಸುವರು. ಹಿರಿಯ ಗಾಯಕ ಪಂ. ರವೀಂದ್ರ ಜಕಾತಿ, ಡಾ. ಮಂಜುನಾಥ ದಂಡಿ ಅತಿಥಿಗಳಾಗಿ ಪಾಲ್ಗೊಳ್ಳುವರು.
ಧಾರವಾಡದ ಕುಮಾರ ಮರಡೂರು ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಪ್ರಸ್ತುತ ಪಡಿಸುವರು. ಪ್ರವೀಣ ಹೂಗಾರ, ಅಂಗದ ದೇಸಾಯಿ ಹಾಗೂ ಹೇಮಂತ ಜೋಶಿ (ತಬಲಾ), ಭರತ ಹೆಗಡೆ ಹೆಬ್ಬಲಸು (ಹಾಮೋನಿಯಂ) ಸಾಥ್ ನೀಡುವರು ಎಂದು ಟ್ರಸ್ಟ್ ಅಧ್ಯಕ್ಷ ಬಸವರಾಜ ವಂದಲಿ ತಿಳಿಸಿದ್ದಾರೆ.