

ಬಳ್ಳಾರಿ: ಚಿತ್ರರಂಗದ ಸ್ಟಾರ್ ನಟರನ್ನ ಭೇಟಿಯಾಗೋದು ಅಷ್ಟು ಸಲೀಸಲ್ಲ. ಆದರೂ ಒಮ್ಮೆ ಪ್ರಯತ್ನ ಮಾಡೋಣ ಅಂತಾ ಇಲ್ಲೊಬ್ಬ ಅಭಿಯಾನಿ ತಮ್ಮ ನೆಚ್ಚಿನ ನಟನನ್ನು ಭೇಟಿಯಾಗಲು ಬರೋಬ್ಬರಿ 400 ಕೀಲೋ ಮೀಟರ್ ಪಾದಯಾತ್ರೆ ನಡೆಸುತ್ತಿದ್ದಾರೆ.
ಟಾಲಿವುಡ್ ಪವರ್ಸ್ಟಾರ್ ಪವನ್ ಕಲ್ಯಾಣ್ ಭೇಟಿಗಾಗಿ ಬಳ್ಳಾರಿಯ ಲಾಲ ಕಮಾನ್ ನಿವಾಸಿ ಬಿ.ಚಂದ್ರಶೇಖರ ಎಂಬುವರು ಬಳ್ಳಾರಿಯಿಂದ ಹೈದರಾಬಾದ್ವರೆಗೂ ಪಾದಯಾತ್ರೆ ನಡೆಸುತ್ತಿದ್ದಾರೆ.
ಕಳೆದ ಸೋಮವಾರ ಪಾದಯಾತ್ರೆ ಆರಂಭಿಸಿರುವ ಚಂದ್ರಶೇಖರ ಇಂದು ಹೈದರಾಬಾದ್ನ ಶಾದ್ ನಗರ ತಲುಪಿದ್ದು, ಇಂದು ಸಂಜೆ ಪವರ್ಸ್ಟಾರ್ ಪವನ್ ಕಲ್ಯಾಣ್ ಹಾಗೂ ರಾಮ್ಚರಣ್ರನ್ನು ಭೇಟಿಯಾಗಲಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಪವನ್ ಕಲ್ಯಾಣ್ರನ್ನ ಭೇಟಿಯಾಗಲು ಪ್ರಯತ್ನಿಸಿದ್ದರು. ಆದರೆ, ಚಂದ್ರಶೇಖರ್ಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಬಳ್ಳಾರಿಯಿಂದ ಹೈದರಾಬಾದ್ವರೆಗೂ ಪಾದಯಾತ್ರೆ ಮೂಲಕ ತೆರಳಿ ನೆಚ್ಚಿನ ನಟನನ್ನ ಭೇಟಿಯಾಗುತ್ತಿರುವುದು ವಿಶೇಷವಾಗಿದೆ. (ದಿಗ್ವಿಜಯ ನ್ಯೂಸ್)