ಕಚೇರಿ ಬಿಟ್ಟು ಮನೆಯಲ್ಲೇ ಕೆಲಸ: ಲಂಚಕ್ಕೆ ಕೈವೊಡ್ಡಿ ಸ್ಥಳೀಯರ ಮೊಬೈಲ್​ನಲ್ಲಿ ಸಿಕ್ಕಿಬಿದ್ದ ಲಂಚಾವತಾರಿ PDO

1240396
Published on

ಯಾದಗಿರಿ: ಕರ್ತವ್ಯ ಸಮಯದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟು ಸ್ಥಳದಲ್ಲಿಯೇ ಹಣ ಸ್ವೀಕರಿಸುತ್ತಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸುರಪುರ ತಾಲೂಕಿನ ಅರಕೇರಾ (ಕೆ) ಗ್ರಾಮದ ಪಿಡಿಒ ದುರ್ಗಶ್ರೀ ಲಂಚ ಸ್ವೀಕರಿಸುತ್ತಿರುವ ಕ್ಷಣವನ್ನು ಮೊಬೈಲ್​ನಲ್ಲಿ ಸೆರೆ ಹಿಡಿದಿರುವ ಸ್ಥಳೀಯರು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಇ-ಸ್ವತ್ತು ಮಾಡಿ ಕೊಡುವ ವಿಚಾರವಾಗಿ ಪಿಡಿಒಗೆ 5 ಸಾವಿರ ಹಾಗೂ ಕಂಪ್ಯೂಟರ್ ಆಪರೇಟರ್​ಗೆ 2 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಡಲಾಗಿತ್ತು. ಕಚೇರಿಯನ್ನು ಬಿಟ್ಟು ತಮ್ಮ ಮನೆಯಲ್ಲೇ ಲಂಚ ಸ್ವಿಕಾರ ಮಾಡುವಾಗ ಸ್ಥಳೀಯರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಪಂಚಾಯತ್​ನ ಎಲ್ಲ ಫೈಲ್​ಗಳನ್ನು ಮನೆಗೆ ತರಸಿಕೊಂಡು ಫೈಲ್​ಗೆ 5 ಸಾವಿರ ರೂ.ನಂತೆ ಲಂಚ ಸ್ವೀಕರಿಸುತ್ತಿದ್ದ ಆರೋಪ ಪಿಡಿಒ ವಿರುದ್ಧ ಕೇಳಿಬಂದಿದೆ.

ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಲಂಚ ಪಡೆದ‌ ಅಧಿಕಾರಿಯನ್ನು ಕೂಡಲೇ ಸೇವೆಯಿಂದ ಅಮಾನತ್ತು ಮಾಡಬೇಕೆಂದು ಕನ್ನಡಪರ ಸಂಘಟನೆಗಳ ಒತ್ತಾಯ ಮಾಡಿವೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net