ಆರಾಧನಾ ಯೋಜನೆಯ ಹಣ ವಿನಿಯೋಗಿಸದ ಬಗ್ಗೆ ದೇಶಪಾಂಡೆ ಗರಂ

Deshapande Meeting
Published on

ಹಳಿಯಾಳ: ಸರ್ಕಾರ ಸಕಾಲದಲ್ಲಿ ಹಣ ಬಿಡುಗಡೆ ಮಾಡಿದ್ದರೂ ಇದುವರೆಗೆ ಸಂಬಂಧಪಟ್ಟವರಿಗೆ ಹಣ ತಲುಪಿಸಲು ಹಾಗೂ ನಿರ್ಮಿತಿ ಕೇಂದ್ರದಿಂದ ಕಾಮಗಾರಿ ಪ್ರಗತಿ ಕುಂಠಿತವಾಗಿರುವ ಬಗ್ಗೆ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದರು.

ಬುಧವಾರ ಹಳಿಯಾಳದ ತಹಸೀಲ್ದಾರ ಕಚೇರಿಯಲ್ಲಿ ಕರೆದಿದ್ದ ಹಳಿಯಾಳ ,ದಾಂಡೇಲಿ ಮತ್ತು ಜೊಯಿಡಾ ತಾಲೂಕುಗಳ ಆರಾಧನಾ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಿರ್ಮಿತಿ ಕೇಂದ್ರದ ಇಂಜಿನಿಯರ್ ಕುಮಾರ ಕುಂಬಾರ ಅವರನ್ನು ತರಾಟೆಗೆ ತೆಗೆದುಕೊಂಡರು.

ಯೋಜನೆಯ ಹಣ ತಲುಪಿಸಲು ಹಾಗೂ ಕಾಮಗಾರಿಗಳನ್ನು ಪೂರ್ಣಗೊಳಿಸಿ, ದೇವಸ್ಥಾನಗಳಿಗೆ ಈ ಕೂಡಲೇ ಹಣ ಸಂದಾಯ ಮಾಡಿ ವರದಿ ಸಲ್ಲಿಸಲು ತಕ್ಷಣ ಕ್ರಮ ವಹಿಸುವಂತೆ ಸಂಬಂಧಪಟ್ಟ ತಹಸೀಲ್ದಾರ್‌ಗಳಿಗೆ ಆರ್.ವಿ.ದೇಶಪಾಂಡೆ ಅವರು ಆದೇಶ ನೀಡಿದರು.

ಹಳಿಯಾಳ ಕ್ಷೇತ್ರಕ್ಕೆ ಆರಾಧನಾ ಯೋಜನೆಯಲ್ಲಿ 1.63 ಕೋಟಿ ರೂ. ಮಂಜೂರಾಗಿದ್ದು, ಅದರಲ್ಲಿ ಸರ್ಕಾರ ಮೊದಲ ಹಾಗೂ ಎರಡನೇ ಕಂತಿನ ಹಣ ಬಿಡುಗಡೆ ಮಾಡಿದೆ. ಬಾಕಿ ಉಳಿದಿರುವ 54.33 ಲಕ್ಷ ರೂ.ಗಳು ಮೂರನೇ ಕಂತಿನ ಹಣ ಶೀಘ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದರು. ಹಳಿಯಾಳ ತಹಶೀಲ್ದಾರ ಪ್ರವೀಣ ಹುಚ್ಚಣ್ಣವರ್, ದಾಂಡೇಲಿ ತಹಶೀಲ್ದಾರ ಶೈಲೇಶ ಪರಮಾನಂದ, ಜೊಯಿಡಾ ತಹಸೀಲ್ದಾರ ಮಂಜುನಾಥ ಮುನವಳ್ಳಿ, ತಾಪಂ ಇಒ ವಿಲಾಸರಾಜ, ಜಿಪಂ ಎಇ ಸತೀಶ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net