ಉತ್ತರ ಕನ್ನಡ: ಗೋವಾದಲ್ಲಿದ್ದ ಪತ್ನಿಗೆ ಕರೆ ಮಾಡಿ ಸಾವಿನ ಹಾದಿ ಹಿಡಿದ ಪತಿರಾಯ

Suicide
Published on

ಉತ್ತರಕನ್ನಡ: ವ್ಯಕ್ತಿಯೊಬ್ಬ ಪತ್ನಿಗೆ ಕರೆ ಮಾಡಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾರವಾರ ತಾಲೂಕಿನ ಚಿತ್ತಾಕುಲದ ನಾಖುದಾಮೊಹಲ್ಲಾದಲ್ಲಿ ಶನಿವಾರ (ಜ.29) ನಡೆದಿದೆ.

ಮಹದ್ ಶಫೀಕ್ (34) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ಮದ್ಯ ವ್ಯಸನದಿಂದಾಗಿ ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದ. ಮದ್ಯವಿಲ್ಲದೆ ಒಂದು ದಿನವೂ ಇರುತ್ತಿರಲಿಲ್ಲ ಎಂದು ತಿಳಿದುಬಂದಿದೆ.

ಗೋವಾದಲ್ಲಿ ಇದ್ದ ಪತ್ನಿಗೆ ಕರೆ ಮಾಡಿದ್ದ ಶಫೀಕ್​, ಇದೀಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಚಿತ್ತಾಕುಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.

ಕರೆ ಮಾಡಿ ಪತ್ನಿಗೆ ಶಫಿಕ್​ ಹೇಳಿದ್ದಾದರೂ ಏನು? ಮತ್ತು ಆತ್ಮಹತ್ಯೆ ಮಾಡಿಕೊಂಡಿದ್ದೇಕೆ ಎಂಬುದರ ಕಾರಣ ತಿಳಿದುಕೊಳ್ಳಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net