ಕೈ-ಕಾಲು ತೊಳೆಯಲು ಕಾಳಿ ನದಿ ದಡಕ್ಕೆ ಹೋದವನನ್ನು ಎಳೆದೊಯ್ದ ಮೊಸಳೆ: ದಾಂಡೇಲಿ ಯುವಕನ ದುರಂತ ಸಾವು

Boy
Published on

ಉತ್ತರಕನ್ನಡ: ದಿನ ನಿತ್ಯದ ಕೆಲಸ ಮುಗಿಸಿ ಕೈ-ಕಾಲು ತೊಳೆಯಲು ಕಾಳಿ ನದಿಯ ದಡಕ್ಕೆ ಹೋಗಿದ್ದ ಯುವಕನನ್ನು ಮೊಸಳೆ ಎಳೆದೊಯ್ದಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ.

ಅರ್ಷದ್ ಖಾನ್ ರಾಯಚೂರ್ (22) ಮೊಸಳೆ ದಾಳಿಗೆ ಬಲಿಯಾದ ಯುವಕ. ಈ ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯ ಪಟೇಲ್ ನಗರದ ನಿವಾಸಿ. ದಿನನಿತ್ಯದ ಕೆಲಸ ಮುಗಿಸಿ ಕೈ ಕಾಲು ತೊಳೆಯಲು ಕಾಳಿ ನದಿಯ ದಡಕ್ಕೆ ಹೋಗಿದ್ದ ಅರ್ಷದ್​ ಖಾನ್​, ನೀರಿಗೆ ಕೈ ಹಾಕುತ್ತಿದ್ದಂತೆ ಮೊಸಳೆ ದಾಳಿ ಮಾಡಿ ಆತನನ್ನು ಎಳೆದೊಯ್ದಿದೆ.

ಮೃತ ಯುವಕನ ಸ್ನೇಹಿತ ಈ ಮಾಹಿತಿಯನ್ನು ನೀಡಿದ್ದಾನೆ. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಯುವಕನ ದೇಹಕ್ಕಾಗಿ ಹುಡುಕಾಟ ನಡೆಸಿದೆ.

ಸ್ಥಳಕ್ಕೆ ಅರಣ್ಯಾಧಿಕಾರಿಗಳು ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದಾಂಡೇಲಿ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net