ಆರ್.ಟಿ.ಓ. ಗೆ ಡಾ.ಮಂಥರ್ ಗೌಡ ಭೇಟಿ

30adarshkdga4
Published on

ಮಡಿಕೇರಿ: ನಗರದ ಹೊರವಲಯದಲ್ಲಿರುವ ಪ್ರಾದೇಶಿಕ ಸಾರಿಗೆ ಕಚೇರಿ(ಆರ್.ಟಿ.ಓ)ಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡರವರು ದಿಢೀರ್ ಭೇಟಿ ನೀಡಿದರು.


ಕಚೇರಿಯ ವಿರುದ್ಧ ದೂರುಗಳು ಬಂದ ಹಿನ್ನೆಲೆಯಲ್ಲಿ ಶಾಸಕರು ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿದರು. ನಂತರ, ಕಚೇರಿಯಲ್ಲಿ ಕಡತಗಳನ್ನು ಇಟ್ಟಿರುವ ಕೊಠಡಿ ಪರಿಶೀಲನೆ ನಡೆಸಿ, ಕಡತಗಳನ್ನು ಸರಿಯಾದ ರೀತಿಯಲ್ಲಿ ಹೊಂದಿಸಿಡಬೇಕೆಂದು ಸೂಚನೆ ನೀಡಿದರು.


ಜನರ ಕೆಲಸ ವಿಳಂಬ ಮಾಡಬಾರದು, ಸಕಾಲದಲ್ಲಿ ಪೂರ್ಣಗೊಳಿಸಿ ಜನರ ಹಿತ ಕಾಪಾಡುವುದು ಸಿಬ್ಬಂದಿಗಳ ಕರ್ತವ್ಯವಾಗಿದೆ. ಭ್ರಷ್ಟಾಚಾರಕ್ಕೆ ಅವಕಾಶ ನೀಡಬಾರದು ಎಂದು ತಾಕೀತು ಮಾಡಿದರು.


ನಂತರ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಈ ಸಂದರ್ಭ ಮುಖಂಡರಾದ ಎಚ್.ಎ.ಹಂಸ, ಪ್ರಕಾಶ್ ಆಚಾರ್ಯ, ಸದಾ ಮುದ್ದಪ್ಪ, ಮುದ್ದುರಾಜ್, ಜಾನ್ಸನ್ ಪಿಂಟೋ ಸೇರಿದಂತೆ ಮತ್ತಿರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net