

ಶ್ರೀನಗರ: ಕಾಶ್ಮೀರದ ಶ್ರೀನಗರದಲ್ಲಿ ಸಂಭವಿಸಿದ ಹಿಮಪಾತದಲ್ಲಿ ಸಿಲುಕಿ ಕೊಡಗು ಮೂಲದ ಯೋಧ ಅಲ್ತಾಫ್ ಅಹ್ಮದ್ (37) ಅವರು ಹುತಾತ್ಮರಾಗಿದ್ದಾರೆ. ಯೋಧನ ಪಾರ್ಥೀವ ಶರೀರ ನಾಳೆ (ಫೆ.25) ಕೊಡಗಿನ ವೀರಾಜಪೇಟೆಗೆ ಆಗಮಿಸುವ ನಿರೀಕ್ಷೆ ಇದೆ.
ಸ್ನೇಹಿತ ಫೈಸಲ್ ಜತೆ ನಿನ್ನೆ ಬೆಳಗ್ಗೆಯಷ್ಟೇ ಮಾತನಾಡಿದ್ದ ಯೋಧ ಅಲ್ತಾಫ್, ಮರುಕ್ಷಣವೇ ದುರಂತ ಘಟನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅಲ್ತಾಫ್ ಎಒಸಿ ರೆಜಿಮೆಂಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರ ಕುಟುಂಬ 10 ವರ್ಷಗಳಿಂದ ಕೇರಳದಲ್ಲೇ ನೆಲೆಸಿದೆ.
ಪಿಯುಸಿ ಓದಿದ್ದ ಅಲ್ತಾಫ್ ಬಳಿಕ ಸೇನೆಗೆ ಸೇರಿ 19 ವರ್ಷಗಳಿಂದ ದೇಶ ಸೇವೆ ಮಾಡುತ್ತಿದ್ದರು. ಇವರು ಕೊಡಗಿನ ವಿರಾಜಪೇಟೆ ಸಮೀಪದ ಎಡಪಾಲದ ನಿವಾಸಿಯನ್ನು ಮದುವೆ ಆಗಿದ್ದರು. (ದಿಗ್ವಿಜಯ ನ್ಯೂಸ್)