

ಬೆಂಗಳೂರು: ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಸಂಸ್ಥೆಗೆ ನೂತನ ಅಧ್ಯಕ್ಷರಾಗಿ ಆರ್.ಶ್ರೀಧರ್, ಭಾನುವಾರ ಪುನಾರಾಯ್ಕೆರಾದರು. ಉಪಾಧ್ಯಕ್ಷರಾಗಿ ವಿ.ಎನ್. ಮೋಹನ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಶಿವಕುಮಾರ್ ಬೆಳ್ಳಿತಟ್ಟೆ, ಖಜಾಂಚಿಯಾಗಿ ಜಿ.ಗಣೇಶ್, ಕಾರ್ಯದರ್ಶಿಯಾಗಿ ಜಿ.ವೈ. ಮಂಜುನಾಥ್, ಜಂಟಿ ಕಾರ್ಯದರ್ಶಿಯಾಗಿ ಧರಣೇಶ್, ಮಹಿಳಾ ಸ್ಥಾನದಲ್ಲಿ ಮಿನಿ ತೇಜಸ್ವಿ ಗೆಲುವಿನ ನಗೆ ಬೀರಿದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಿವಣ್ಣ, ಶರಣಬಸಪ್ಪ, ಯಾಸ್ನಫ್ ಮುಸ್ತಾಕ್, ಮುತ್ತಾಜ್ ಅಲೀಮ್, ರೋಹಿಣಿ ಅಡಿಗ ಹಾಗೂ ಮಂಜುನಾಥ್ ಆಯ್ಕೆಯಾದರು. ಒಟ್ಟು 1,040 ಮತದಾರರ ಪೈಕಿ 767 ಮತದಾರರು ತಮ್ಮ ಹಕ್ಕು ಚಲಾಯಿಸಿದರು.
ಅಧ್ಯಕ್ಷ ಸ್ಥಾನಕ್ಕೆ ಆರ್.ಶ್ರೀಧರ್,ಧ್ಯಾನಪೂಣಚ್ಚ, ಸುಭಾಶ್ ಹೂಗಾರ್ ಸ್ಪರ್ಧಿಸಿದ್ದರು. ಒಟ್ಟು 404 ಮತ ಪಡೆದ ಶ್ರೀಧರ್, ಗೆಲುವು ಸಾಧಿಸಿ ಸತತ 2ನೇ ಬಾರಿ ಮರು ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನದಲ್ಲಿ ವಿ.ಎನ್.ಮೋಹನ್ ಕುಮಾರ್ 417, ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿ ಶಿವಕುಮಾರ್ ಬೆಳ್ಳಿತಟ್ಟೆ 336, ಖಜಾಂಚಿ ಸ್ಥಾನದಲ್ಲಿ ಜಿ.ಗಣೇಶ್ 556, ಕಾರ್ಯದರ್ಶಿ ಸ್ಥಾನದಲ್ಲಿ ಜಿ.ವೈ. ಮಂಜುನಾಥ್ 288, ಜಂಟಿ ಕಾರ್ಯದರ್ಶಿ ಸ್ಥಾನದಲ್ಲಿ ಧರಣೇಶ್ 195, ಮಹಿಳಾ ಮೀಸಲು ಸ್ಥಾನದಲ್ಲಿ ಮಿನಿ ತೇಜಸ್ವಿ 491 ಮತ ಪಡೆದು ವಿಜಯಶಾಲಿಯಾದರು.
ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನದಲ್ಲಿ ರೋಹಿಣಿ ಅಡಿಗ 306, ಮಂಜುನಾಥ್ 281,ಮುತ್ತಾಜ್ ಅಲೀಮ್ 272, ಯಾಸ್ನಫ್ ಮುಸ್ತಾಕ್ 259, ಶರಣ ಬಸಪ್ಪ 258 ಹಾಗೂ ಶಿವಣ್ಣ 234 ಮತ ಪಡೆದು ಗೆಲುವಿನ ನಗೆ ಬೀರಿದರು. ಭಾನುವಾರ ಬೆಳಗ್ಗೆ 9 ಗಂಟೆಯಿಂದ 2 ಗಂಟೆವರೆಗೆ ಮತದಾನ ಮಾಡುವುದಕ್ಕೆ ಅವಕಾಶ ನೀಡಲಾಯಿತು. ಮತದಾರರು ಮತಗಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಕಾರಣ ಮತಗಟ್ಟೆ ಅಧಿಕಾರಿ, ಮತದಾನಕ್ಕೆ ಹೆಚ್ಚಿನ ಸಮಯ ನೀಡಿದರು.