

ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ್ ಸಂಘ ( ಆರ್‌ಎಸ್‌ಎಸ್) ಮೂಲವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೆಣಕಿರುವುದು ಬಿಜೆಪಿಯ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯು ಸಿದ್ದರಾಮಯ್ಯ ಅವರನ್ನು ಬುರುಡೆ ರಾಮಯ್ಯ ಎಂಬ ಹ್ಯಾಶ್ಟ್ಯಾಗ್ ಅಡಿಯಲ್ಲಿ ಸರಣಿ ಕೂ ಮಾಡುವ ಮೂಲಕ ವಾಗ್ದಾಳಿ ನಡೆಸಿದೆ.
ಆಫ್ಘಾನಿಸ್ತಾನದ ಬಾಬರ್ ಸಮಾಧಿಗೆ, 1959ರಲ್ಲಿ ನೆಹರೂ, 1968ರಲ್ಲಿ ಇಂದಿರಾ ಗಾಂಧಿ, 2005ರಲ್ಲಿ ರಾಹುಲ್ ಗಾಂಧಿ ಭೇಟಿ ನೀಡಿದ್ದಾರೆ. ಭೇಟಿಯ ಬಳಿಕ ಇಂದಿರಾ "ಮೈ ಟ್ರೂ ಹೋಮ್ ಕಮಿಂಗ್" ಎಂದು ಉದ್ಘರಿಸಿದ್ದರು. ಸಾವಿರಾರು ಹಿಂದೂಗಳನ್ನು ಹತ್ಯೆಗೈದ ಬಾಬರ್ ಎಂಬ ಮತಾಂಧನ ಮೂಲ ಹಾಗೂ ಇವರ ಮೂಲ ಎರಡೂ ಒಂದೇ ಆಗಿದೆಯೇ? ಬುರುಡೆರಾಮಯ್ಯ ಎಂದು ಪ್ರಶ್ನಿಸಿದೆ.
ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡಬೇಕು ಎಂದು ಮಹಾತ್ಮ ಗಾಂಧಿ ಹೇಳಿದ್ದರು. ಈಗಿರುವ ಕಾಂಗ್ರೆಸ್ ಪಕ್ಷ, ಇಂದಿರಾ ಕಾಂಗ್ರೆಸ್ ಪಕ್ಷ ಮತ್ತು ನಕಲಿ ಗಾಂಧಿಗಳ ಪಕ್ಷ. ಅಂದಹಾಗೆ ಸಿದ್ದರಾಮಯ್ಯ ಅವರೇ, ನೀವು ಕೂಡ ಜನತಾದಳ ಪಕ್ಷದಿಂದ, ಅಧಿಕಾರದ ಮೋಹದಿಂದ ನಕಲಿ ಗಾಂಧಿ ಪಕ್ಷಕ್ಕಕ್ಕೆ ಬಂದವರಲ್ಲವೇ?
ಸಿದ್ದರಾಮಯ್ಯ ಅವರೇ, ನೀವು ಯಾರ ವಿಶ್ವಾಸಕ್ಕಾಗಿ ಹೇಳಿಕೆ ನೀಡುತ್ತಿದ್ದೀರೋ, ಅವರ ಮೂಲ ನಿಮಗೆ ತಿಳಿದಿಲ್ಲವೇ? ಫಿರೋಜ್ ಗಾಂಧಿ - ಫಿರೋಜ್ ಜೆಹಾಂಗೀರ್ ಗ್ಯಾಂಡಿ, ಪರ್ಷಿಯನ್ ಮೂಲ, ಸೋನಿಯಾ ಗಾಂಧಿ - ಎಡ್ವಿಜ್ ಆಂಟೋನಿಯಾ ಅಲ್ಬಿನಾ ಮೈನೊ, ಇಟಲಿ ಮೂಲ, ರಾಹುಲ್ ಗಾಂಧಿ - ರೌಲ್ ವಿನ್ಸಿ.
ಸಿದ್ದರಾಮಯ್ಯ ಅವರೇ, ಇಂದಿರಾ ಕಾಂಗ್ರೆಸ್, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಆಗಿದ್ದೇಗೆ? ಇಂದಿರಾ ಪ್ರಿಯದರ್ಶಿನಿ ಗ್ಯಾಂಡಿ, ಇಂದಿರಾ ಗಾಂಧಿ ಆಗಿದ್ದೇಗೆ? ಎಂದು ಪ್ರಶ್ನಿಸಿದೆ.