ಬದುಕಿರೋರನ್ನೇ ಕರೆತರಲು ಕಷ್ಟವಾಗಿರೋ ಸಮಯದಲ್ಲಿ ನವೀನ್ ಶವ‌ ತರುವುದು ಹೆಚ್ಚು ಕಷ್ಟವಾಗಿದೆ: ಶಾಸಕ ಅರವಿಂದ ಬೆಲ್ಲದ

Aravind Bellad
Published on

ಧಾರವಾಡ: ಯೂಕ್ರೇನ್​ನಲ್ಲಿ ಭಾರತೀಯರ ರಕ್ಷಣೆ ವಿಚಾರವಾಗಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರು ನೀಡುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿ ಅರವಿಂದ ಬೆಲ್ಲದ, ವಿದೇಶಾಂಗ ಇಲಾಖೆಯು ನವೀನ್​ ಶವ ತರುವ ಪ್ರಯತ್ನದಲ್ಲಿದೆ. ಸ್ವತಃ ಪ್ರಧಾನಿ ಮೋದಿ ಅವರೇ ಮುತುವರ್ಜಿ ವಹಿಸಿದ್ದಾರೆ. ವಿದ್ಯಾರ್ಥಿಗಳನ್ನೂ ತರುವ ಪ್ರಯತ್ನ ನಡೆದಿದೆ ಎಂದು ಹೇಳಿದರು.

ಅಲ್ಲಿ ಯುದ್ದ ಭೂಮಿ ಇದೆ. ಮಾಧ್ಯಮದವರೇ ಅದನ್ನು ತೋರಿಸುತ್ತಿದ್ದಾರೆ. ಸಾಧ್ಯವಾದರೆ ಶವ ತರುವ ಕೆಲಸ ಆಗಲಿದೆ. ಜೀವಂತ ಇದ್ದವರನ್ನೇ ತರುವುದು ಕಷ್ಟ ಆಗಿದೆ. ಇದೊಂದು ಶವ‌ ತರುವುದಂತೂ ತುಂಬಾ ಕಷ್ಟವಾಗಿದೆ. ವಿಮಾನದಲ್ಲಿ ಶವ ತರಲು ಹೆಚ್ಚು ಜಾಗ‌ಬೇಕು. ಶವ‌ ಇರುವ ಜಾಗದಲ್ಲೇ 8-10 ಜನ ಬರಬಹುದು ಎಂದರು.

ಯೂಕ್ರೇನ್​ನಲ್ಲಿ ಇರುವವರು ಒತ್ತಡದಲ್ಲಿದ್ದಾರೆ. ಕೆಲವರು ರೊಮೇನಿಯಾಗೆ ಬಂದಿದ್ದಾರೆ ಅಂದರೆ ಸೆಫ್ ಆಗಿದ್ದಾರೆ ಎಂದರ್ಥ. ಅಲ್ಲಿ‌ ನಮ್ಮ‌‌ ವಿದೇಶಾಂಗ ಇಲಾಖೆ ಅವರಿಗೆ ಊಟ ಹಾಗೂ‌‌ ವಸತಿ ವ್ಯವಸ್ಥೆ ಮಾಡಿದೆ. ಅವರನ್ನು ತರುವ‌ ಕೆಲಸ ಬೇಗ ಆಗಲಿದೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net