ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿಯವರಿಗೆ ಗೌರವ ಸೂಚಿಸಲು ಹೋಗಿ KSRTC ಎಡವಟ್ಟು

Manjamma
Published on

ವಿಜಯನಗರ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿ ಅವರಿಗೆ ಕೆಎಸ್​ಆರ್​ಟಿಸಿ ಗೌರವ ಸೂಚಿಸಲು ಹೋಗಿ ಎಡವಟ್ಟು ಮಾಡಿಕೊಂಡಿದೆ.

ಬಸ್​ ಟಿಕೆಟ್ ಮೇಲೆ ಮಾತಾ ಮಂಜಮ್ಮ ಜೋಗತಿ ಹೆಸರು ಮುದ್ರಣ ಮಾಡಲಾಗಿದೆ. ಗೌರವ ಸಲ್ಲಿಸಲು ಹೋಗಿ ಸಾರಿಗೆ ಇಲಾಖೆ ತಪ್ಪು ಮುದ್ರಣ ಮಾಡಿದೆ.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಜಯನಗರ ಜಿಲ್ಲೆಯ ತೃತೀಯ ಲಿಂಗಿ ಮಾತಾ ಮಂಜಮ್ಮ ಜೋಗತಿಯವರಿಗೆ ಸಾರಿಗೆ ಇಲಾಖೆಯಿಂದ... ಅಂತಾ ಸಾರಿಗೆ ಇಲಾಖೆ ಟಿಕೆಟ್​ ಮೇಲೆ ಬರೆದಿದೆ. ಟಿಕೆಟ್​ನಲ್ಲಿ ಗೌರವ ಅಥವಾ ಅಭಿನಂದನೆ ಅಂತಾ ಸೂಚಿಸದೇ, ವಾಕ್ಯ ಪೂರ್ಣಗೊಳಿಸದೇ ಅರ್ಧಕ್ಕೆ ಮೊಟಕುಗೊಳಿಸುವ ಮೂಲಕ ಸಾರಿಗೆ ಇಲಾಖೆ ಅಗೌರವ ಸೂಚಿಸಿದೆ.

ಇದೀಗ ಹೊಸಪೇಟೆಯಿಂದ ಸಂಡೂರು ಘಟಕಕ್ಕೆ ಹೋಗಬೇಕಾದರೆ ಪಡೆದಿರುವ ಟಿಕೆಟ್​ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮಾತಾ ಶ್ರೀ ಮಂಜಮ್ಮ ಜೋಗತಿಯವರಿಗೆ ಇತ್ತಿಚೀಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net