

ತಿ.ನರಸೀಪುರ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಪಟ್ಟಣ ಸಮೀಪದ ಸೇಂಟ್ ನೋರ್ಬಟ್ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಆರ್.ನಿರೀಕ್ಷಾ ಶೇ.91.33 ಅಂಕ ಪಡೆಯುವ ಮೂಲಕ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾಳೆ. ಒಟ್ಟು 600 ಅಂಕಗಳಿಗೆ 548 ಅಂಕ ಪಡೆದಿದ್ದಾಳೆ. ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ 96 ಅಂಕ ದಾಖಲಿಸಿದ್ದಾಳೆ. ಈಕೆ ಪಟ್ಟಣದ ಪಾರ್ವತಿ ಲಾರಿ ಮಾಲೀಕ ಎಂ.ರವಿ ಹಾಗೂ ಹೇಮಾ ದಂಪತಿ ಪುತ್ರಿ.