ಗೆಸ್ಟ್​ ಹೌಸ್​ ವಿಚಾರಕ್ಕೆ ನಿಖಿಲ್​ ಕುಮಾರಸ್ವಾಮಿ-ಜಮೀರ್​ ಅಹ್ಮದ್​ ಬೆಂಬಲಿಗರ ನಡುವೆ ಗಲಾಟೆ!

Nikhil Zameer
Published on

ಬೆಂಗಳೂರು: ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ಬೆಂಬಲಿಗರು ಮತ್ತು ಮಾಜಿ ಸಚಿವ ಜಮೀರ್​ ಅಹ್ಮದ್ ಬೆಂಬಲಿಗರ ನಡುವೆ ಸದಾಶಿವನಗರ ಗೆಸ್ಟ್ ಹೌಸ್ ಬಳಿ ಗಲಾಟೆ ನಡೆದಿರುವುದಾಗಿ ತಿಳಿದುಬಂದಿದೆ

ಸದಾಶಿವನಗರ ಗೆಸ್ಟ್ ಹೌಸ್ ಬಳಿ ನಿಖಿಲ್​ ಕುಮಾರಸ್ವಾಮಿ ಬೆಂಬಲಿಗರು ತೆರಳಿದ್ದರು. ಇದೇ ವೇಳೆ ಜಮೀರ್ ಬೆಂಬಲಿಗರು ಕೂಡ ಗೆಸ್ಟ್ ಹೌಸ್ ಬಳಿ ಜಮಾವಣೆಗೊಂಡಿದ್ದರು. ಈ ವೇಳೆ ಇಬ್ಬರ ಬೆಂಬಲಿಗರ ನಡುವೆ ಮಾತಿನ ಚಕಮಕಿ ಉಂಟಾಗಿ ಗಲಾಟೆ ನಡೆದಿದೆ.

ಗೆಸ್ಟ್ ಹೌಸ್ ವಿಚಾರಕ್ಕೆ ಗಲಾಟೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಗೆಸ್ಟ್​ಹೌಸ್ ಬಳಿ ತೆರಳಿದ ನಿಖಿಲ್ ಕುಮಾರಸ್ವಾಮಿಯ ಮೂವರು ಬಾಡಿ ಗಾರ್ಡ್​ಗಳು ಗೆಸ್ಟ್ ಹೌಸ್ ನಮ್ಮದು ಎಂದು ಕೇರ್​ಟೇಕರ್​ನನ್ನು ಓಡಿಸಿದ್ದಾರೆ ಅನ್ನೋ ಆರೋಪ‌ ಕೇಳಿಬಂದಿದೆ. ಆದರೆ, ಗೆಸ್ಟ್ ಹೌಸ್ ನಮ್ಮದು ಅಂತಾ ಜಮೀರ್​ ಪಿಎ ಫಾರೂಕ್​ ಠಾಣೆಗೆ ದೌಡಾಯಿಸಿದ್ದಾರೆ.

ಸದ್ಯ ಪ್ರಕರಣ ಸದಾಶಿವನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಮುಂದೆ ಯಾವ ತಿರುವು ಪಡೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ. (ದಿಗ್ವಿಜಯ ನ್ಯೂಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net