

ಸಾಂಸ್ಕೃತಿಕ ನಗರಿ ಮೈಸೂರು ಕುಟುಂಬ ರಾಜಕಾರಣದ ಕೇಂದ್ರ ಬಿಂದುವಾಗುವ ಎಲ್ಲ ಲಕ್ಷಣಗಳು ಗೋಚರವಾಗುತ್ತಿವೆ. ಸಿದ್ದರಾಮಯ್ಯ, ಜಿ.ಟಿ. ದೇವೇಗೌಡ, ಮಹದೇವಪ್ಪ, ವಿಶ್ವನಾಥ್, ಕೆ.ಮಹದೇವು ಅವರ ಮಕ್ಕಳು ರಾಜಕೀಯಕ್ಕೆ ಎಂಟ್ರಿ ಕೊಟ್ಟಾಯ್ತು. ಇದೀಗ ಸಾ.ರಾ. ಮಹೇಶ್ ಪುತ್ರ ರಾಜಕೀಯಕ್ಕೆ ಕಾಲಿಡಲು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಮಗನನ್ನು ರಾಜಕೀಯಕ್ಕೆ ಕರೆತರಲು ಸಾರಾ ಮಹೇಶ್ ಆಸಕ್ತಿ ಹೊಂದಿದ್ದಾರೆ. ಈಗಾಗಲೇ ಪುತ್ರ ಜಯಂತ್ ಜನರ ಸಂಪರ್ಕ ಸಾಧಿಸುವ ಪ್ರಯತ್ನದಲ್ಲಿದ್ದು, ಕೆ.ಆರ್.ನಗರ ಕ್ಷೇತ್ರದಾದ್ಯಂತ ಸಂಚರಿಸುತ್ತಿದ್ದಾರೆ. ಕ್ಷೇತ್ರದ ಕ್ರಿಕೆಟ್, ಬಾಲಿಬಾಲ್ ಪಂದ್ಯಾವಳಿ ಸೇರಿದಂತೆ ಹಲವು ಸಭೆ ಸಮಾರಂಭಗಳಲ್ಲಿ ಜಯಂತ್ ಭಾಗಿಯಾಗುತ್ತಿದ್ದಾರೆ. ಇನ್ನೆರಡು ವರ್ಷಗಳ ನಂತರ ಮಗನಿಗೆ ಕ್ಷೇತ್ರ ಬಿಟ್ಟು ಕೊಡಲು ಸಾರಾ ಮಹೇಶ್ ಚಿಂತನೆ ನಡೆಸಿದ್ದಾರೆಂದು ತಿಳಿದುಬಂದಿದೆ.