ಸಂಸದೆ ಸುಮಲತಾ ಅಂಬರೀಷ್​ಗೆ ಓಪನ್​ ಚಾಲೆಂಜ್​ ಹಾಕಿದ ಜೆಡಿಎಸ್​ ಶಾಸಕ ಡಿ.ಸಿ. ತಮ್ಮಣ್ಣ

Sumalatha
Published on

ಮಂಡ್ಯ: ಸಂಸದೆ ಸುಮಲತಾಗೆ ಮಾಜಿ ಸಚಿವ ಹಾಗೂ ಮದ್ದೂರು ಜೆಡಿಎಸ್ ಶಾಸಕ ಡಿ.ಸಿ.ತಮ್ಮಣ್ಣ ಓಪನ್ ಚಾಲೆಂಜ್ ಹಾಕಿದ್ದು, ಬಹಿರಂಗ ಚರ್ಚೆಗೆ ಬರುವಂತೆ ಆಹ್ವಾನ ನೀಡಿದ್ದಾರೆ.

ಶಾಸಕರ ಕೆಲಸವನ್ನೂ ನಾನೇ ಮಾಡ್ತಿದ್ದೀನಿ ಎಂದಿದ್ದ ಸುಮಲತಾಗೆ ಡಿ.ಸಿ. ತಮ್ಮಣ್ಣ ಪಂಥಾಹ್ವಾನ ನೀಡಿದ್ದಾರೆ. ಇನ್ನೊಬ್ಬರ ಪ್ರಮಾಣ ಪತ್ರ ತೆಗೆದುಕೊಳ್ಳುವ ಅವಶ್ಯಕತೆ ನಮಗಿಲ್ಲ. ನಮ್ಮ ಕ್ಷೇತ್ರದ ಜನ ಯಾವ ಪ್ರಮಾಣ ಪತ್ರ ಕೊಡ್ತಾರೆ ಅದು ಮುಖ್ಯ ಎಂದು ಹೇಳುವ ಮೂಲಕ ಸುಮಲತಾಗೆ ತಮ್ಮಣ್ಣ ತಿರುಗೇಟು ನೀಡಿದ್ದಾರೆ.

ಸಮಸ್ಯೆ ಇದ್ದರೆ ಜನ ನಮ್ಮ ಬಳಿ ಬರಬೇಕು ಅವರ ಬಳಿ ಹೋದರೆ ಏನು ಆಗತ್ತೆ ಸಮಸ್ಯೆಯನ್ನ ಬಗೆಹರಿಸುವುದಿದ್ದರೆ ಸುಮಲತಾರೆ ಬಗೆಹರಿಸಲಿ. ನಮ್ಮ ಕೆಲಸದ ಬಗ್ಗೆ ಓಪನ್ ಚಾಲೆಂಜ್ ಮಾಡಲಿ. ಚೆರ್ಚೆಗೆ ತಯಾರಿದ್ದೇವೆ. ಸುಮಲತಾ ಯಾವಾಗ ಬೇಕಿದ್ದರು ಬರಲಿ. ಮಾಧ್ಯಮ ಮುಂದೆಯೇ ಬಹಿರಂಗ ಚರ್ಚೆಗೆ ತಮ್ಮಣ್ಣ ಆಹ್ವಾನ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net