ಅಪ್ಪಂದಿರ ದಿನವೇ ದುರಂತ: ಮಗಳ ಆತ್ಮಹತ್ಯೆ ಸುದ್ದಿ ಕೇಳಿ ತಂದೆ ಸಾವು, ಕಾರಣ ಮನಕಲಕುವಂತಿದೆ

PU Std
Published on

ಮಂಡ್ಯ: ಮಗಳ ಆತ್ಮಹತ್ಯೆಯಿಂದ ಮನನೊಂದ ತಂದೆಯು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಮಳವಳ್ಳಿ ತಾಲೂಕಿನ ತಳಗವಾದಿ ಗ್ರಾಮದಲ್ಲಿ ನಡೆದಿದೆ. ಅಪ್ಪಂದಿರ ದಿನದಂದೇ ಈ ದುರಂತ ಸಂಭವಿಸಿರುವುದು ಮನಕಲಕುವಂತಿದೆ.

ಬಾಂಧವ್ಯ (17), ರಾಜು (65) ಸಾವಿಗೀಡಾದ ತಂದೆ-ಮಗಳು. ಪಿಯುಸಿ ಕಾಲೇಜು ಸೇರಿಸುವ ವಿಚಾರದಲ್ಲಿಯೂ ತಂದೆಯ ಜತೆ ಬಾಂದವ್ಯ ಮುನಿಸಿಕೊಂಡಿದ್ದಳು. ಅಲ್ಲದೆ, ಆನ್​ಲೈನ್​ ಕ್ಲಾಸ್​ಗಳಿಂದ ಬಾಂದವ್ಯ ಖಿನ್ನತೆಗೆ ಒಳಗಾಗಿದ್ದಳು. ವಿದ್ಯಾಭ್ಯಾಸ ಕುಂಠಿತವಾಗುವ ಆತಂಕ ಹೊಂದಿದ್ದಳು. ಕಳೆದ ವರ್ಷ ಎಸ್​ಎಸ್​ಎಲ್​ಸಿಯಲ್ಲಿ ಶೇ. 92 ಅಂಕ ಪಡೆದಿದ್ದಳು.

ಬನ್ನೂರು ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಬಾಂದವ್ಯ ಮಧ್ಯರಾತ್ರಿ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾಳೆ. ಮಗಳ ಸಾವಿನಿಂದ ಮನನೊಂದು ತಂದೆಯೂ ಮೃತಪಟ್ಟಿದ್ದಾರೆ. ಲೋ ಬಿಪಿಯಿಂದಾಗಿ ತಂದೆ ರಾಜು ಸಾವಿಗೀಡಾಗಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಮಳವಳ್ಳಿ ಗ್ರಾಮಾಂತರ ಠಾಣಾ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net