ಯುಗಾದಿ ಹಬ್ಬಕ್ಕೆಂದು ಮನೆಗೆ ಬಂದಿದ್ದ ಲೈಟ್​ ಬಾಯ್​, ಯುವತಿ ವಿಚಾರಕ್ಕೆ ಭೀಕರ ಹತ್ಯೆ

Young Man
Published on

ಚಾಮರಾಜನಗರ: ಪ್ರೇಮ ವಿಚಾರಕ್ಕೆ ಯುವಕನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಗುಂಡ್ಲುಪೇಟೆಯ ಹೊಸೂರು ಬಡಾವಣೆಯಲ್ಲಿ ನಡೆದಿದೆ.

ಹೊಸೂರು ಬಡಾವಣೆಯ ಚಿಕ್ಕರಾಜು (30) ಕೊಲೆಯಾದ ದುರ್ದೈವಿ. ಬೆಂಗಳೂರಿನಲ್ಲಿ ಲೈಟ್ ಬಾಯ್ ಆಗಿದ್ದ ಚಿಕ್ಕರಾಜು, ಹಬ್ಬಕ್ಕೆಂದು ಮನೆಗೆ ಬಂದಿದ್ದಾಗ ಕೊಲೆಯಾಗಿದ್ದಾನೆ. ಚಿಕ್ಕರಾಜು ತಮ್ಮ ವಿನೋದ್ ಎಂಬಾತ ಸೋನಾಕ್ಷಿ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಈ ವಿಚಾರವಾಗಿ ಸೋನಾಕ್ಷಿ ಸಂಬಂಧಿಕರಿಂದ ಕೃತ್ಯ ನಡೆದಿದೆ.

ಸೋನಾಕ್ಷಿ ಸಂಬಂಧಿ ವೀರಭದ್ರನಾಯ್ಕ, ಆಕೆಯ ತಂದೆ ಮಹದೇವನಾಯ್ಕ, ಸಹೋದರರಾದ ಕಿರಣ್​ ಮತ್ತು ಅಭಿಷೇಕ ಅವರಿಂದ ಕೊಲೆ ನಡೆದಿದೆ. ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net