

ಕೊಪ್ಪಳ: ಪರಸ್ಪರ ಪ್ರೀತಿಸಿ ಮದುವೆಯಾದ ಜೋಡಿಗೆ ಇದೀಗ ತೊಂದರೆ ಎದುರಾಗಿದೆ. ಜಾತಿ ಕಾರಣಕ್ಕಾಗಿ ಯುವತಿ ಮನೆಯವರು ಬೆದರಿಕೆ ಹಾಕುತ್ತಿದ್ದು, ನವದಂಪತಿ ರಕ್ಷಣೆಯನ್ನು ಕೋರಿ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಳಿ ಹೋಗಿದ್ದಾರೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾದ ವಿದ್ಯಾಶ್ರೀ ಹಾಗೂ ಪ್ರಶಾಂತ ಕಟ್ಟಿಮನಿ ನವದಂಪತಿ ಎಸ್ಪಿ ದೂರು ನೀಡಿದ್ದಾರೆ. ಇಬ್ಬರು ಕಳೆದ 2013ರಲ್ಲೇ ಮದುವೆ ಆಗಿದ್ದಾರೆ. ಮದುವೆ ನಂತರವೂ ವಿದ್ಯಾಶ್ರೀ ತನ್ನ ತವರು ಮನೆಯಲ್ಲೇ ಇದ್ದಳು. ಯುವಕ ಕೆಳಜಾತಿ ಎಂಬ ಕಾರಣಕ್ಕೆ ಯುವತಿ ಕುಟುಂಬ ಮದುವೆಗೆ ವಿರೋಧ ವ್ಯಕ್ತಪಡಿಸಿದೆ.
ಯುವತಿ ಮೊದಲ ವರ್ಷದ ಇಂಜಿನಿಯರಿಂಗ್ ಓದುತ್ತಿರುವಾಗಲೇ ಮದುವೆ ಆಗಿದೆ. ಬಳಿಕ ಕಳೆದ 8 ವರ್ಷದಿಂದ ಮನೆಯವರನ್ನು ಒಪ್ಪಿಸಲು ಯುವತಿ ಯತ್ನಿಸಿದ್ದಾಳೆ. ಒಪ್ಪದಿದ್ದಾಗ 3 ದಿನದ ಹಿಂದೆ ಪ್ರೀತಿಸಿ ಮದುವೆಯಾದ ಯುವಕನ ಮನೆಗೆ ಯುವತಿ ಬಂದಿದ್ದಾಳೆ. ಇದರ ಬೆನ್ನಲ್ಲೇ ಯುವಕನ ಮನೆಗೆ ಬಂದು ಯುವತಿ ಮನೆಯವರು ಜೀವ ಬೆದರಿಕೆ ಹಾಕಿದ್ದಾರೆಂದು ಆರೋಪ ಮಾಡಲಾಗಿದೆ. ಸದ್ಯ ಈ ಸಂಬಂಧ ಕೊಪ್ಪಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್)