

ಕೋಲಾರ: ಹಸುವೊಂದರ ಆಪರೇಷನ್ ಮಾಡಿದ ಪಶುವೈದ್ಯರು ಹಸುವಿನ ಹೊಟ್ಟೆಯಲ್ಲಿ ಇದ್ದ ಕಬ್ಬಿಣದ ಮೊಳೆ ಮತ್ತು ತಂತಿಯನ್ನು ಯಶಸ್ವಿಯಾಗಿ ಹೊರತೆಗೆದು ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಕೋಲಾರದ ಭಟ್ರಹಳ್ಳಿ ಗ್ರಾಮದ ವೆಂಕಟರಾಮ್ ಎಂಬುವರ ಹಸುವಿನ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಹೊಟ್ಟೆ ಉಬ್ಬಿತ್ತು, ಸಗಣಿ ಹಾಕುತ್ತಿರಲಿಲ್ಲ. ಹಸುವನ್ನು ಪರೀಕ್ಷಿಸಿದ ಪಶು ವೈದ್ಯರಿಗೆ ಹೊಟ್ಟೆಯಲ್ಲಿ ಕಬ್ಬಿಣದ ಮೊಳೆ ಮತ್ತು ತಂತಿ ಇರುವುದು ಕಂಡು ಬಂದಿದೆ.
ತಕ್ಷಣ ಚಿಕಿತ್ಸೆ ನೀಡಲು ಮುಂದಾದ ಡಾ. ನಿತಿನ್ ಹಸುವಿನ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಯಶಸ್ವಿಯಾಗಿ ಹಸುವಿನ ಹೊಟ್ಟೆಯಿಂದ ಕಬ್ಬಿಣದ ಮೊಳೆ ಮತ್ತು ತಂತಿಯನ್ನು ಹೊರತೆಗೆದಿದ್ದಾರೆ.
ಸದ್ಯ ಹಸು ಈಗ ಆರೋಗ್ಯವಾಗಿದೆ. ಹುಲ್ಲು ತಿನ್ನುವಾಗ ಮೊಳೆ ಮತ್ತು ತಂತಿ ಹೊಟ್ಟೆಯಲ್ಲಿ ಸೇರಿಕೊಂಡಿದೆ ಎನ್ನಲಾಗಿದೆ. ಡಾ. ನಿತಿನ್, ರಾಕೇಶ್ ಮತ್ತು ಮಂಜುನಾಥ್ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. (ದಿಗ್ವಿಜಯ ನ್ಯೂಸ್) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ