BREAKING NEWS| ಬೊಮ್ಮಾಯಿ ಕ್ಯಾಬಿನೆಟ್​ನಲ್ಲಿ ಯಾರಿಗೆ-ಯಾವ ಖಾತೆ? ಅಧಿಕೃತ ಪಟ್ಟಿ ಬಿಡುಗಡೆ

Bommai
Published on

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟಕ್ಕೆ ಯಾರೆಲ್ಲ ಸೇರಿದ್ದಾರೆ ಎಂಬುದು ಈಗಾಲೇ ತಿಳಿದಿದೆ. ಆಗಸ್ಟ್​ 4ರಂದು ಸಚಿವ ಸಂಪುಟ ರಚನೆಯಾಗಿದ್ದು, ಹಳಬರ ಹಾಗೂ ಹೊಸಬರ ಮಿಶ್ರಣದೊಂದಿಗೆ 29 ಸಚಿವರು ಸಂಪುಟ ಸೇರಿದ್ದಾರೆ. ಆದರೆ, ಸಂಪುಟ ರಚನೆಯಾಗಿ ಮೂರು ದಿನಗಳು ಕಳೆದರೂ ಖಾತೆ ಹಂಚಿಕೆಯಾಗಿರಲಿಲ್ಲ. ಕೊನೆಗೂ ಖಾತೆ ಹಂಚಿಕೆಗೆ ಬಿಜೆಪಿ ಹೈಕಮಾಂಡ್​ ಗ್ರೀನ್​ ಸಿಗ್ನಲ್​ ನೀಡಿದ್ದು, ಅಧಿಕೃತ ಪಟ್ಟಿ ಶನಿವಾರ (ಆಗಸ್ಟ್ 7) ಬೆಳಗ್ಗೆ ಹೊರಬಿದ್ದಿದೆ.

ನೂತನ ಸಚಿವರಿಗೆ ಹಂಚಿಕೆಯಾದ ಖಾತೆಗಳ ವಿವರ ಈ ಕೆಳಕಂಡಂತಿದೆ....

  • ಸಿಎಂ ಬವರಾಜ ಬೊಮ್ಮಾಯಿ- ಹಣಕಾಸು, ಗುಪ್ತಚರ, ಬೆಂಗಳೂರು ಅಭಿವೃದ್ಧಿ, ಡಿಪಿಎಆರ್ ಸೇರಿದಂತೆ ಇತರ ಹಂಚದ ಖಾತೆಗಳು
  • ಆರ್​. ಅಶೋಕ್- ಕಂದಾಯ ಖಾತೆ (ಮುಜರಾಯಿ ಹೊರತುಪಡಿಸಿ)
  • ಮಧುಸ್ವಾಮಿ- ಕಾನೂನು ಹಾಗೂ ಸಂಸದೀಯ ವ್ಯವಹಾರ/ ಸಣ್ಣ ನೀರಾವರಿ ಖಾತೆ
  • ಮುರುಗೇಶ್​ ನಿರಾಣಿ- ಕೈಗಾರಿಕೆ ಖಾತೆ
  • ಅಶ್ವಥ್ ನಾರಾಯಣ- ಉನ್ನತ ಶಿಕ್ಷಣ ಮತ್ತು ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯ ಅಭಿವೃದ್ಧಿ
  • ಡಾ.ಕೆ. ಸುಧಕಾರ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ವಿಜ್ಞಾನ
  • ಎಸ್​.ಟಿ. ಸೋಮಶೇಖರ್- ಸಹಕಾರ
  • ಬೈರತಿ ಬಸವರಾಜ್- ನಗರಾಭಿವೃದ್ಧಿ
  • ಸುನಿಲ್ ಕುಮಾರ್- ಇಂಧನ ಮತ್ತು ಕನ್ನಡ ಹಾಗೂ ಸಂಸ್ಕೃತಿ ಖಾತೆ
  • ನಾಗೇಶ್- ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ
  • ಕೆ.ಎಸ್​.ಈಶ್ವರಪ್ಪ- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​
  • ಗೋಪಾಲಯ್ಯ- ಅಬಕಾರಿ ಖಾತೆ
  • ಸಿ.ಸಿ. ಪಾಟೀಲ್- ಲೋಕೋಪಯೋಗಿ ಇಲಾಖೆ
  • ಶಶಿಕಲಾ ಜೊಲ್ಲೆ- ಮುಜರಾಯಿ, ಹಜ್​ ಮತ್ತು ವಕ್ಫ್​
  • ಶ್ರೀರಾಮುಲು- ಸಾರಿಗೆ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ
  • ಗೋವಿಂದ ಕಾರಜೋಳ- ಜಲಸಂಪನ್ಮೂಲ ಖಾತೆ
  • ವಿ. ಸೋಮಣ್ಣ- ವಸತಿ
  • ಬಿ.ಸಿ. ಪಾಟೀಲ್- ಕೃಷಿ
  • ಎಂಟಿಬಿ ನಾಗರಾಜ್​- ಪುರಸಭೆಯ ಆಡಳಿತ, ಸಣ್ಣ ಕೈಗಾರಿಕೆಗಳು, ಸಾರ್ವಜನಿಕ ವಲಯದ ಉದ್ಯಮಗಳು
  • ಕೋಟಾ ಶ್ರೀನಿವಾಸ ಪೂಜಾರಿ- ಸಮಾಜಕಲ್ಯಾಣ/ ಹಿಂದುಳಿದ ವರ್ಗಗಳ ಕಲ್ಯಾಣ
  • ಮುನಿರತ್ನ- ತೋಟಗಾರಿಕೆ, ಯೋಜನೆ ಮತ್ತು ಸಾಂಖ್ಯಿಕ ಖಾತೆ
  • ಕೆ.ಸಿ.ನಾರಾಯಣ- ರೇಷ್ಮೆ, ಕ್ರೀಡೆ, ಯುವಜನ ಸಬಲೀಕರಣ
  • ಶಿವರಾಂ ಹೆಬ್ಬಾರ್​- ಕಾರ್ಮಿಕ
  • ಉಮೇಶ್ ಕತ್ತಿ- ಅರಣ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಖಾತೆ
  • ಪ್ರಭುಚೌಹಾಣ್​ ಔರಾದ್​- ಪಶು ಸಂಗೋಪನೆ
  • ಹಾಲಪ್ಪ ಆಚಾರ್​- ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ
  • ಶಂಕರ್​ ಪಾಟೀಲ್​ ಮುನೇನಕೊಪ್ಪ- ಕೈಮಗ್ಗ ‌ಮತ್ತು ಜವಳಿ, ಸಕ್ಕರೆ
  • ಎಸ್​. ಅಂಗಾರ- ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ
  • ಅರಗ ಜ್ಞಾನೇಂದ್ರ- ಗೃಹ ಸಚಿವ
  • ಆನಂದ್​ ಸಿಂಗ್​- ಪರಿಸರ ಹಾಗೂ ಪ್ರವಾಸೋದ್ಯಮ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net