ಕರೊನಾ ಸೋಂಕಿತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಆಂಬ್ಯುಲೆನ್ಸ್ ಚಾಲಕನ ಮತ್ತೊಂದು ಮುಖ ಬಯಲು

AB Driver
Published on

ಕಲಬುರಗಿ: ಕರೊನಾ ಸೋಂಕಿತೆ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಜೈಲು ಪಾಲಾಗಿದ್ದ ಆಂಬ್ಯುಲೆನ್ಸ್ ಚಾಲಕನ ಮತ್ತೊಂದು ಕರಾಳ ಮುಖ ಬಯಲಾಗಿದೆ.

ಕರೊನಾ ಸೋಂಕಿತ ಯುವತಿಯ ಮೇಲೆ ಅತ್ಯಾಚಾರ ಯತ್ನಕ್ಕೂ ಮುನ್ನವೆ ನಡೆದಿತ್ತು ಮತ್ತೊಂದು ಹೀನ ಕೃತ್ಯ. ಜಿಮ್ಸ್ ಆಸ್ಪತ್ರೆಯ ಲಿಫ್ಟ್​ನಲ್ಲಿ ಮಹಿಳೆಯ ಸೆರಗಿಗೆ ಕೈ ಹಾಕಿದ್ದ ಕಾಮುಕು ಪ್ರೇಮಸಾಗರ ಅಲಿಯಾಸ್ ಪಿಂಟು.

ಸೆರಗಿಗೆ ಕೈ ಹಾಕಿರೋದನ್ನ ಕಂಡು ಜಿಮ್ಸ್ ಬೌನ್ಸರ್​ಗಳಿಂದ ಧರ್ಮದೇಟು ತಿಂದಿದ್ದ. ಆಸ್ಪತ್ರೆಯಲ್ಲಿ ಕೂಡ ಹಾಕಿ ಧರ್ಮೆದೇಟು ನೀಡಲಾಗಿತ್ತು. ಅಲ್ಲದೆ, ಮುಂದೆ ಹೀಗೆ ಮಾಡಬೇಡ ಎಂದು ಎಚ್ಚರಿಕೆ ಸಹ ನೀಡಲಾಗಿತ್ತು.

ಅದಾದ ಬಳಿಕವು ಕರೊನಾ ಸೊಂಕಿತ ಯುವತಿ ಮೇಲೆ ಅತ್ಯಾಚಾರಕ್ಕೆ ಕಾಮುಕ ಯತ್ನಿಸಿ, ಜೈಲು ಪಾಲಾಗಿದ್ದಾನೆ. ಅತ್ಯಾಚಾರ ಯತ್ನದಿಂದ ಮಾನಸಿಕವಾಗಿ ಮನನೊಂದಿದ್ದ ಕರೊನಾ ಸೋಂಕಿತೆ ಕಳೆದ ಎರಡು ದಿನಗಳ ಹಿಂದೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net