ಬೀದರ -ಕಲಬುರಗಿ - ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾಗಿ ಆರ್.ಕೆ. ಪಾಟೀಲ ಅವಿರೋಧ ಆಯ್ಕೆ

ತೀವ್ರಕುತೂಹಲ ಕೆರಳಿಸಿದ್ದ ಬೀದರ್ ಕಲಬುರಗಿ ಹಾಗೂ ಯಾದಗಿರಿ ಹಾಲು ಉತ್ಪಾದಕರ ಸಹಕಾರ ಒಕ್ಕೂಟದ ಅಧ್ಯಕ್ಷರಾಗಿ ಆರ್.ಕೆ. ಪಾಟೀಲ ಅವರು ಇಂದು ಅವಿರೋಧವಾಗಿ ಆಯ್ಕೆಯಾಗಿದರು. ಎರಡನೇ ಸಲ ಅವರು ಅದ್ಯಕ್ಷರಾದರು.
IMG-20231011-WA0007
Published on

ವಿಜಯವಾಣಿ ಸುದ್ದಿಜಾಲ ಕಲಬುರಗಿ
ತೀವ್ರಕುತೂಹಲ ಕೆರಳಿಸಿದ್ದ ಬೀದರ್ ಕಲಬುರಗಿ ಹಾಗೂ ಯಾದಗಿರಿ ಹಾಲು ಉತ್ಪಾದಕರ ಸಹಕಾರ ಒಕ್ಕೂಟದ ಅಧ್ಯಕ್ಷರಾಗಿ ಆರ್.ಕೆ. ಪಾಟೀಲ ಅವರು ಇಂದು ಅವಿರೋಧವಾಗಿ ಆಯ್ಕೆಯಾಗಿದರು. ಎರಡನೇ ಸಲ ಅವರು ಅದ್ಯಕ್ಷರಾದರು.

ನಗರದ ಹುಮನಾಬಾದ ರಸ್ತೆಯ ಡೈರಿ ಸರ್ಕಲಗ ಸಮೀಪದಲ್ಲಿ ಇರುವ ಹಾಲು ಒಕ್ಕೂಟ ಕಚೇರಿಯಲ್ಲಿ ಬುಧವಾರ ಚುನಾವಣಾಧಿಕಾರಿಗಳಾಗಿರುವ ಸಹಾಯ ಆಯುಕ್ತರಾದ ಮಮತಾಕುಮಾರಿ ಅವರು ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು...

ಅಧ್ಯಕ್ಷ ಸ್ಥಾನದ ಚುನಾವಣೆಗೆ ಕಾಂಗ್ರೆಸ್‌ ಮುಖಂಡರಾದ ರಾಮಚಂದ್ರರಾವ ಕಲ್ಯಾಣರಾವ ಪಾಟೀಲ ( ಆರ್‌.ಕೆ.ಪಾಟೀಲ) ಒಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಅವಿರೋಧ ಆಯ್ಕೆ ಘೋಷಣೆ ಮಾಡಿದರು.

ಒಕ್ಕೂಟದ ಆಡಳಿತ ಮಂಡಳಿಯಲ್ಲಿ ಚುನಾಯಿತ 13 ನಿರ್ದೇಶಕರು, ಒಬ್ಬರು ನಾಮನಿರ್ದೇಶಿತ ಸದಸ್ಯ, ನಾಲ್ವರು ಅಧಿಕಾರಿಗಳು ಸಭೆಯಲ್ಲಿ ಇದ್ದರು.
ಎನ್‌ಡಿಡಿಬಿ ಪ್ರತಿನಿಧಿ ಎ.ಎಲ್‌. ಹಲನಾಯಕ ಗೈರಾಗಿದ್ದರು.
ಫಲಿತಾಂಶ ಘೋಷಣೆ ಆಗುತ್ತಲೇ ಅವರ ಬೆಂಬಲಿಗರು, ಕಾರ್ಯಕರ್ತರು, ಸಹಕಾರಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸಭಾಂಗಣದಿಂದ ಹೊರ ಬರುತ್ತಲೇ ಪಾಟೀಲ್ ಅವರಿಗೆ ಹಾರ ಹಾಕಿ, ಶಾಲು ಹೊದಿಸಿ ಗೌರವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net