ಆರ್.ಕೆ. ನಾರಾಯಣ್ ಸಾಹಿತ್ಯ ಪರಿಚಯಿಸುವ ಅಗತ್ಯವಿದೆ: ಪ್ರೊ.ಎಂ.ಕೃಷ್ಣೇಗೌಡ ಅಭಿಪ್ರಾಯ

13
Published on

ಅರಿವು ಶಾಲೆಯು ಇಂಡಿಯಾ ಫೌಂಡೇಶನ್ ಫಾರ್ ಆರ್ಟ್ಸ್ ಸಹಯೋಗದಲ್ಲಿ ನಡೆಸುತ್ತಿರುವ ಆರ್.ಕೆ. ನಾರಾಯಣ್ ಅವರ ಸಾಹಿತ್ಯವನ್ನು ಮಕ್ಕಳಿಗೆ ಪರಿಚಯಿಸುವ ಯೋಜನೆಯಡಿಯಲ್ಲಿ ಶಾಲೆಯ ಮಕ್ಕಳು ಇತ್ತೀಚೆಗೆ ಕಿರುರಂಗಮಂದಿರದಲ್ಲಿ ‘ತಲುಪದ ಕಾಗದ’ ನಾಟಕ ಪ್ರಸ್ತುತಪಡಿಸಿದರು.

ನಾಟಕ ವೀಕ್ಷಿಸಿದ ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಮಾತನಾಡಿ, ಮಕ್ಕಳು ದೊಡ್ಡವರ ಪಾತ್ರಗಳನ್ನು ನಾಟಕಗಳಲ್ಲಿ ಅಭಿನಯಿಸುವುದನ್ನು ನೋಡಿದಾಗ ಪಾಲಕರಿಗೆ ಸಂತೋಷವಾಗುತ್ತದೆ. ಹಾಗೆಯೇ, ನಿಜ ಜೀವನದಲ್ಲಿ ನಾವೇನು ಅಲ್ಲವೋ ಆ ಪಾತ್ರಗಳನ್ನು ನಾಟಕದಲ್ಲಷ್ಟೇ ಮಾಡಿ ಖುಷಿಪಡಲು ಸಾಧ್ಯ. ಆರ್.ಕೆ.ನಾರಾಯಣ್ ಅವರ ಸಾಹಿತ್ಯವನ್ನು ಈಗಿನ ತಲೆಮಾರಿನ ಮಕ್ಕಳಿಗೆ ಪರಿಚಯಿಸುವ ಪ್ರಯತ್ನ ಶ್ಲಾಘನೀಯ. ನಾಟಕ ನೋಡಿದ ಮೇಲೆ ಇದು ಯಶಸ್ವಿಯಾಗುವ ಹಾದಿಯಲ್ಲಿದೆ ಎಂದು ತಿಳಿಯುತ್ತದೆ ಎಂದರು.

ಮಕ್ಕಳು ನಾಟಕದಲ್ಲಿ ಆಯಾ ಪಾತ್ರವೇ ಆಗಿ ಸಹಜವಾಗಿ ಅಭಿನಯಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಿರ್ದೇಶಕ ಪ್ರವೀಣ್ ಬೆಳ್ಳಿ, ಐಎಫ್‌ಎ ಸಂಯೋಜಕ ಕೃಷ್ಣಮೂರ್ತಿ, ಅರಿವು ಶಾಲೆಯ ಮಕ್ಕಳ ಪಾಲಕರು, ಶಿಕ್ಷಕರು ಮತ್ತು ಆಡಳಿತ ಮಂಡಳಿ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net