ಗ್ರಾಹಕರ ಮೆಚ್ಚುಗೆ ಪಡೆದ ಆರ್.ಕೆ.ಎಲೆಕ್ಟ್ರಾನಿಕ್ಸ್

Published on

ಬಳ್ಳಾರಿ : ಇಲ್ಲಿನ ಬ್ರಾಹ್ಮಣ ಬೀದಿ, ಕಾಳಮ್ಮ ಬೀದಿಯ ವಾಡ್ಲಾ ಕಾಲೇಜು ಬಳಿ ಹಾಗೂ ಮೋತಿ ವೃತ್ತದ ಬಳಿಯಿರುವ ಆರ್.ಕೆ.ಎಲೆಕ್ಟ್ರಾನಿಕ್ಸ್ ಶೋ ರೂಮ್‌ನಲ್ಲಿ ಆನ್‌ಲೈನ್‌ಗಿಂತ ಕಡಿಮೆ ಬೆಲೆಗೆ ಗುಣಮಟ್ಟದ ವಸ್ತುಗಳು ದೊರೆಯುತ್ತಿದ್ದು ಗ್ರಾಹಕರನ್ನು ಸೆಳೆಯುತ್ತಿವೆ. ದಸರಾ, ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಈ ಬಾರಿ ವಿಜಯವಾಣಿ ವಿಜಯೋತ್ಸವ ಜತೆಗೆ ಕ್ರೆಡಿಟ್ ಕಾರ್ಡ್ ಮೇಲೆ ಶೇ. 15ರಷ್ಟು ಕ್ಯಾಷ್‌ಬ್ಯಾಕ್ ನೀಡಲಾಗುತ್ತಿದೆ. ಪ್ರಮುಖವಾಗಿ ಬಜಾಜ್, ಟಿವಿಎಸ್ ಕೊಟಕ್, ಎಚ್‌ಡಿಬಿ ಪೈನಾನ್ಸ್ ಲೋನ್ಸ್ ಸೌಲಭ್ಯ ಸಹ ಸೇರಿ ವಿವಿಧ ರೀತಿಯ ಕೊಡುಗೆಗಳನ್ನು ನೀಡಲಾಗಿದೆ. ಹೀಗಾಗಿ ಆರ್.ಕೆ.ಎಲೆಕ್ಟ್ರಾನಿಕ್ಸ್ ಶೋ ರೂಮ್ ಗೃಹೋಪಯೋಗಿ ವಸ್ತುಗಳ ಮಾರಾಟ ಹಾಗೂ ಗ್ರಾಹಕರ ವಿಶ್ವಾಸ ಗಳಿಸುವಲ್ಲಿ ಹೆಸರಾಗಿದೆ. ಶೋ ರೂಮ್‌ನಲ್ಲಿ ವಿಶ್ವಾಸರ್ಹ ವಿವಿಧ ಕಂಪನಿಗಳ ಪ್ರೀಡ್ಜ್, ಮೊಬೈಲ್, ಟಿವಿ, ಮಿಕ್ಸರ್, ಏರ್ ಕೂಲರ್ ಮತ್ತು ಲ್ಯಾಪ್‌ಟಾಪ್, ಮೊಬೈಲ್ಸ್ ಸೇರಿ ವಿವಿಧ ಬಗೆಯ ಗೃಹೋಪಯೋಗಿ ವಸ್ತುಗಳು ಇಲ್ಲಿ ಲಭ್ಯವಿದೆ. ಖುದ್ದು ಗ್ರಾಹಕರು ಯಾವುದಾದರೂ ಉಪಕರಣ ಖರೀದಿಸಿದಾಗ ಸ್ಥಳದಲ್ಲಿಯೇ ವಸ್ತುವಿನ ಆನ್‌ಲೈನ್ ದರವನ್ನು ನೋಡಿ ಖರೀದಿಸಬಹುದಾಗಿದೆ. ಆನ್‌ಲೈನ್ ಮಾರುಕಟ್ಟೆಯಲ್ಲಿ ವಸ್ತುಗಳ ಗುಣಮಟ್ಟ ಕೆಲವೊಮ್ಮೆ ಸರಿಯಿರಲ್ಲ ಎಂಬ ದೂರುಗಳು ಇವೆ. ಆದರೆ, ಆರ್.ಕೆ.ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಗುಣಮಟ್ಟದ ವಸ್ತುಗಳನ್ನು ಪರಿಶೀಲಿಸಿ ತೆಗೆದುಕೊಳ್ಳಬಹುದು.

ದೀಪಾವಳಿ ಆಫರ್ : ದೀಪಾವಳಿ ಹಿನ್ನೆಲೆಯಲ್ಲಿ ಆನ್‌ಲೈನ್‌ಗಿಂತ ಕಡಿಮೆ ದರದಲ್ಲಿ ಗ್ರಾಹಕರಿಗೆ ವಿವಿಧ ಬಗೆಯ ಗೃಹೋಪಯೋಗಿ ವಸ್ತುಗಳನ್ನು ನೀಡಲಾಗುತ್ತಿದೆ. ಶೇ. 10 ರಿಂದ 15ರವರಗೆ ಕ್ಯಾಷ್‌ಬ್ಯಾಕ್ ಸೌಲಭ್ಯವಿದೆ. ಶೂನ್ಯ ಬಡ್ಡಿದರದಲ್ಲಿ ವಸ್ತುಗಳನ್ನು ಖರೀದಿಸಬಹುದು. ಒಂದು ತಿಂಗಳು ಕಂತು (ಇಎಂಐ) ಉಚಿತವಾಗಿ ನೀಡಲಾಗುತ್ತಿದೆ. ಪ್ರತಿ ನಿತ್ಯ ಖರೀದಿಸುವ ಗ್ರಾಹಕರಿಗೆ ಲಕ್ಕಿ ಡಿಪ್ ಮೂಲಕ 1 ಗ್ರಾಂ ಚಿನ್ನ ಗೆಲ್ಲಬಹುದು. ಅಲ್ಲದೆ, ಸ್ಕ್ರಾೃಚ್ ಕಾರ್ಡ್ ಮೂಲಕ ನೂರರಿಂದ ಐದು ಸಾವಿರ ರೂ. ಪಡೆಯಬಹುದು.

ಕೋಟ್.. ಬಳ್ಳಾರಿಯಲ್ಲಿ 1999 ರಲ್ಲಿ ಶೋ ರೂಮ್ ಆರಂಭಿಸಿದ್ದು, 25ಕ್ಕೂ ಅಧಿಕ ವರ್ಷಗಳು ಕಳೆದಿದೆ. ವರ್ಷದಿಂದ ವರ್ಷಕ್ಕೆ ಗ್ರಾಹಕರ ಸಂಖ್ಯೆ ಹೆಚ್ಚುತ್ತಿರುವುದರಿಂದ ನಗರದ ಮೋತಿ ಬಳಿ, ಸಿರಗುಪ್ಪ ಹಾಗೂ ತೋರಣಗಲ್‌ನಲ್ಲಿ ಸೇರಿ ಮೂರು ಹೊಸ ಶೋ ರೂಮ್‌ಗಳನ್ನು ತೆರೆಯಲಾಗಿದೆ. ಈವರೆಗೆ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದೆಯೇ ಹೊರತು, ಕಡಿಮೆಯಾಗಿಲ್ಲ. ಒಟ್ಟಾರೆ ಜಿಲ್ಲಾದ್ಯಂತ ಐದು ಶೋ ರೂಮ್‌ಗಳಿವೆ.

- ಆರ್.ಕೆ.ರವಿ, ಆರ್.ಕೆ. ಎಲೆಕ್ಟ್ರಾನಿಕ್ಸ್ ಶೋ ರೂಮ್ ಮಾಲೀಕ, ಬಳ್ಳಾರಿ.

ಕೋಟ್... ಕಳೆದ ಹಲವು ವರ್ಷಗಳಿಂದ ಗುಣಮಟ್ಟದ ವಸ್ತುಗಳನ್ನು ಮಾರಾಟ ಮಾಡಿ ಗ್ರಾಹಕರ ವಿಶ್ವಾಸಗಳಿಸಿದೆ. ಅಲ್ಲದೆ, ಹೊಸ ಕೊಡುಗೆಗಳ ಬಗ್ಗೆ ಪರಿಚಯಿಸಿ ಗ್ರಾಹಕರಿಗೆ ಅನುಕೂಲ ಮಾಡುವಲ್ಲಿ ಒಂದು ಹೆಜ್ಜೆ ಮುಂದೆ ಇದೆ. ಜಿಲ್ಲೆಯಷ್ಟೇ ಅಲ್ಲದೆ, ಚಿತ್ರದುರ್ಗ, ವಿಜಯನಗರ, ಕೊಪ್ಪಳ ಮತ್ತು ಆಂಧ್ರದಿಂದ ಗ್ರಾಹಕರು ಬರುತ್ತಿದ್ದಾರೆ.

- ಆರ್.ಕೆ.ಶ್ರೀಕಾಂತ್, ಆರ್.ಕೆ.ಎಲೆಕ್ಟ್ರಾನಿಕ್ಸ್ ಶೋ ರೂಮ್ ಮಾಲೀಕ, ಬಳ್ಳಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net