ಐಟಿಐ ಅಭ್ಯರ್ಥಿಗಳಿಗೆ ಮತ್ತೊಂದು ಸುವರ್ಣಾವಕಾಶ

ITI
Published on

ಬೆಂಗಳೂರು: ಐಟಿಐ ಅಭ್ಯರ್ಥಿಗಳಿಗೆ ಮತ್ತೊಂದು ಸುವರ್ಣಾವಕಾಶ. ದಿ ಡೈರೆಕ್ಟೋರೇಟ್ ಜನರಲ್ ಆಫ್ ಟ್ರೈನಿಂಗ್ ನಿಮಿ ಪೋರ್ಟಲ್ ಅನ್ನು ಜೂನ್ ತಿಂಗಳಲ್ಲಿ ಪುನಃ ತೆರೆಯಲಾಗಿದೆ ಎಂದು ಸಚಿವ ಅಶ್ವಥ್​ ನಾರಾಯಣ್​ ಕೂ ಮಾಡಿದ್ದಾರೆ.

ಈ ಹಿಂದೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ತೆರೆಯಲಾಗಿತ್ತು. ITI ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು NIMI ಪೋರ್ಟಲ್ ಜೂನ್ 16 ರಿಂದ 25, 2022 ತೆರೆದಿರುತ್ತದೆ. 31.07.2022 ರವರೆಗೆ ಸಂಯೋಜಿತ ಆದೇಶವನ್ನು ಸ್ವೀಕರಿಸುವ ಅರ್ಜಿದಾರರನ್ನು 2022 ಸೆಷನ್ ಗೆ ಅನುಮತಿಸಲಾಗುತ್ತದೆ ಎಂದು ಹೇಳಿದ್ದಾರೆ.

ನಿಮಿ ಪೋರ್ಟಲ್ ಅನ್ನು ಜೂನ್ ತಿಂಗಳ 16 ರಿಂದ 25ರವರೆಗೆ ಪುನಃ ತೆರೆಯಲಿದ್ದು, ಈ ಅವಧಿಗಳೊಳಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ತದನಂತರ ಬಂದಂತಹ ಯಾವುದೇ ಅರ್ಜಿಗಳನ್ನು ಮಾನ್ಯ ಮಾಡಲಾಗುವುದಿಲ್ಲ. 31.07.2022 ರವರೆಗೆ ಸಂಯೋಜಿತ ಆದೇಶವನ್ನು ಸ್ವೀಕರಿಸುವ ಅರ್ಜಿದಾರರನ್ನು 2022 ಸೆಷನ್ ಗೆ ಅನುಮತಿಸಲಾಗುತ್ತದೆ.

ಮುಖ್ಯವಾದ ಅಂಶವೆಂದರೆ NIMI ಪೋರ್ಟಲ್ ನಲ್ಲಿ ಶುಲ್ಕವನ್ನು ಪಾವತಿಸದ ಅಥವಾ ಅರ್ಜಿಯು ಪರಿಪೂರ್ಣವಾಗಿರದಿದ್ದರೆ ಅಂತಹ ಅರ್ಜಿದಾರರನ್ನು ಅಧಿವೇಶನ 2022 ಕ್ಕೆ ಪರಿಗಣಿಸಲಾಗುವುದಿಲ್ಲ. ಇಂತಹ ಅಭ್ಯರ್ಥಿಗಳು ಮುಂದಿನ ಅಧಿವೇಶನದಲ್ಲಿ ಪಾಲ್ಗೊಳ್ಳಬಹುದು.

ರಾಜ್ಯ ನಿರ್ದೇಶನಾಲಯವು ಹಂತ 1 ರಲ್ಲಿ ಬಾಕಿ ಇರುವ ಅರ್ಜಿಗಳ ಡೆಸ್ಕ್‌ಟಾಪ್ ಮೌಲ್ಯಮಾಪನವನ್ನು ಪೂರ್ಣಗೊಳಿಸಬೇಕು. ಹಂತ 2 ಮತ್ತು 3ರಲ್ಲಿ ಅರ್ಜಿಗಳನ್ನು ready to inspect ಹಂತಕ್ಕೆ ಕಳುಹಿಸಬೇಕು.

Koo App
📌 For ITI applications - The NIMI portal is open from June 16 - 25, 2022, to complete the application process. It’s a one-time relaxation. Applicants receiving the affiliation order till 31.07.2022 will be permitted for the 2022 session. @BJP4Karnataka @CMOKarnataka
View attached media content
-Dr. Ashwathnarayan C. N. | ಡಾ. ಅಶ್ವಥ್ ನಾರಾಯಣ್ ಸಿ.ಎನ್. (@drashwathnarayan)17 June 2022
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net