ಇಂದ್ರಜಿತ್​ ಲಂಕೇಶ್​ ನಮ್ಮ ತೋಟದ ಮನೆಗೆ ಬಂದಿದ್ರು ಆದ್ರೆ... ದರ್ಶನ್​ ಕೇಸ್​ ಬಗ್ಗೆ ನಿಖಿಲ್​ ಹೇಳಿದ್ದು ಹೀಗೆ​

Nikhil
Published on

ರಾಮನಗರ: ಇಂದ್ರಜಿತ್​ ಲಂಕೇಶ್​ ನಮ್ಮ ತೋಟದ ಮನೆಗೆ ಬಂದಿದ್ರು ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿಕೆ ನೀಡಿರುವುದು ಭಾರಿ ಕುತೂಹಲ ಸೃಷ್ಟಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು 10- 15 ದಿನಗಳ ಹಿಂದೆ ಕೇತುಗಾನಹಳ್ಳಿಯ ತೋಟದ ಮನೆಗೆ ಬಂದಿರಬಹುದು. ಯಾವುದೋ ಬೇರೆ ವಿಚಾರದ ಬಗ್ಗೆ ಮಾತನಾಡಲು ನಮ್ಮ ತಂದೆಯವರನ್ನು ಭೇಟಿ ಮಾಡಲು ಬಂದಿರವಹುದು. ಇವತ್ತಿನ ವಿಷಯಕ್ಕೆ ಆ ಭೇಟಿಯನ್ನು ತಳಕು ಹಾಕೋದು ಬೇಡ ಎಂದು ಹೇಳಿದರು.

ನಾನು ಯಾರ ಬಗ್ಗೆಯು ಮಾತನಾಡುವುದಿಲ್ಲ. ಸಾರ್ವಜನಿಕ ಜೀವನದಲ್ಲಿ ಇರುವವರು ಜವಬ್ದಾರಿಯುತವಾಗಿ ಇರಬೇಕು. ನಮ್ಮ ನಡೆಗಳನ್ನ ಜನರು ಗಮನಿಸುತ್ತಿರುತ್ತಾರೆ. ಸಾರ್ವಜನಿಕವಾಗಿ ಯಾರು ಹೇಗೆ ಬದುಕುತ್ತಾರೆ ಎಂಬುದು ಅವರ ಅವರ ವಿಚಾರ. ಕುಮಾರಣ್ಣ ಅವರನ್ನ ಎಲ್ಲಾ ವಿಚಾರದಲ್ಲಿ ಕ್ಲಬ್ ಮಾಡುವುದು ಸರಿಯಲ್ಲ ಎಂದರು.

ಎಚ್​ಡಿಕೆ-ಇಂದ್ರಜಿತ್​ ಭೇಟಿಯ ಫೋಟೋಗಳನ್ನು ಬೇರೆ ಬೇರೆ ದುರುದ್ದೇಶಕ್ಕೆ ವೈರಲ್ ಮಾಡಿರಬಹುದು. ಪೋಟೋ ವೈರಲ್ ಬಗ್ಗೆ ಇಂದ್ರಜಿತ್ ಅವರನ್ನೆ ಪ್ರಶ್ನೆ ಮಾಡಿ. ಅವರೆ ಪೋಟೋ ವಿಚಾರವಾಗಿ ಪ್ರತಿಕ್ರಿಯೆ ಕೊಡುತ್ತಾರೆ ಎಂದು ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಹೇಳಿಕೆ ನೀಡಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net