ಆಸ್ತಿಗಾಗಿ 98 ವರ್ಷದ ಅಜ್ಜಿಯನ್ನೇ ಹೊತ್ತೊಯ್ದ ಸಂಬಂಧಿಕರು: ಹಾನಗಲ್​ನಲ್ಲಿ ನಡೆಯಿತು ನೀಚ ಕೃತ್ಯ

Ajji
Published on

ಹಾವೇರಿ: ಆಸ್ತಿಗಾಗಿ 98 ವರ್ಷದ ಅಜ್ಜಿಯನ್ನೇ ಸಂಬಂಧಿಕರು ಹೊತ್ತೊಯ್ದಿರುವ ಆತಂಕಕಾರಿ ಘಟನೆ ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ಬುಧವಾರ ನಡೆದಿದೆ.

ಮನಗೆ ನುಗ್ಗಿದ ಸಂಬಂಧಿಕರು ಅಜ್ಜಿಯನ್ನು ಹೆಗಲ ಮೇಲೆ ಹೊತ್ತೊಯ್ದಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. 98 ವರ್ಷದ ದೇವಕ್ಕ ದುಂಡಣ್ಣನವರ 7 ಎಕರೆ 36 ಗುಂಟೆ ಜಮೀನಿಗಾಗಿ ಸಂಬಂಧಿಕರು ಈ ನೀಚ ಕೃತ್ಯ ಮಾಡಿದ್ದಾರೆ. ಅಜ್ಜಿಯ ಪತಿಯ ಸಹೋದರನ ಮಕ್ಕಳಿಂದ ಪಾಪದ ಕೃತ್ಯ ನಡೆದಿದೆ.

ಸಂತೋಷ ದುಂಡಣ್ಣನವರ, ಈರಪ್ಪ ದುಂಡಣ್ಣನವರ, ಆದಪ್ಪ ದುಂಡಣ್ಣನವರ, ದ್ರಾಕ್ಷಾಯಿಣಿ ದುಂಡಣ್ಣನವರ, ಸಾವಿತ್ರಾ ದುಂಡಣ್ಣನವರ, ಮಂಜಪ್ಪ ದುಂಡಣ್ಣನವ, ಪ್ರಕಾಶ್ ದುಂಡಣ್ಣನವರ ಇಷ್ಟು ಮಂದಿ ಅಜ್ಜಿಯನ್ನು ಹೊತ್ತೊಯ್ದಿದ್ದಾರೆ.

ಅನಾರೋಗ್ಯದಲ್ಲಿದ್ದಾಗ ಅಜ್ಜಿಯನ್ನು ಮಾಣಿಕಪ್ಪ ದುಂಡಣ್ಣನವರ ಎಂಬುವರು ಸಾಕಿದ್ದರು. ಕಳೆದ 30 ವರ್ಷಗಳಿಂದ ಅಜ್ಜಿಯನ್ನು ಸಾಕಿ ಸಲುಹಿದ್ದರು. ಹೀಗಾಗಿ ತನ್ನ ಹೆಸರಿನಲ್ಲಿದ್ದ ಜಮೀನಿನನ್ನು ಮಾಣಿಕಪ್ಪ ಹೆಸರಿಗೆ ಮಾಡಿದ್ದರು. ಇದೀಗ ನಮ್ಮ ಹೆಸರಿಗೆ ಮಾಡಲಿಲ್ಲ ಅಂತಾ ಅಜ್ಜಿಯನ್ನೆ ಪಾಪಿಗಳು ಹೊತ್ತೊಯ್ದಿದ್ದಾರೆ.

ಒಟ್ಟು ಐದು ಜನರ ಮೇಲೆ ಮಾಣಿಕಪ್ಪನ ಮಗ ಭರತೇಶ ಆಡೂರು ಠಾಣೆಗೆ ದೂರು ನೀಡಿದ್ದಾರೆ. ಅಜ್ಜಿಯಿಲ್ಲದೆ ಮಾಣಿಕಪ್ಪನ ಕುಟುಂಬಸ್ಥರು ಮನೆಯಲ್ಲಿ ಗೋಳಾಡುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಜ್ಜಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್ ಹಾವೇರಿ​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net