ವಿವಾಹಿತನ ಜತೆ ಪಕ್ಕದಮನೆ ಯುವತಿ ಎಸ್ಕೇಪ್: ಒಂದು ವರ್ಷದ ರಹಸ್ಯ ಬಯಲು

Girl
Published on

ಗಂಗೊಳ್ಳಿ: ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದ ವಿವಾಹಿತ ಹಾಗೂ ಯುವತಿಯೋರ್ವಳು ನಾಪತ್ತೆಯಾಗಿರುವ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕುಂದಾಪುರ ತಾಲೂಕು ಆಲೂರು ಗ್ರಾಮದ ಹೆಬ್ಬಾಗಿಲು ಮನೆ ಹತ್ತಿರ ವಾಸಿಸುತ್ತಿದ್ದ ಬಾಬಿ ಎಂಬುವರ ಪತಿ ಚಂದ್ರ (42) ಹಾಗೂ ಇವರ ಮನೆಯ ಪಕ್ಕದಲ್ಲಿಯೇ ವಾಸಿಸುತ್ತಿದ್ದ ವನಜಾ (29) ಎಂಬುವರು ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು.

ಜೂನ್ 7ರಂದು ಚಂದ್ರ ಪೇಟೆಗೆ ಹೋಗುವುದಾಗಿ ಹೇಳಿ ಹೋಗಿದ್ದು, ಅದೇ ದಿನ ಮಧ್ಯಾಹ್ನ ವನಜಾ ಸಹ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದು, ಇಬ್ಬರೂ ಈವರೆಗೆ ವಾಪಸು ಮನೆಗೆ ಬಂದಿಲ್ಲ. ಚಂದ್ರ ಹಾಗೂ ವನಜಾ ಪರಸ್ಪರ ಪ್ರೀತಿಸಿ ಮನೆ ಬಿಟ್ಟು ಹೋಗಿರಬಹುದು ಎಂದು ಬಾಬಿ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net