ಪೊಲೀಸ್​ ಕಾರಿನಲ್ಲಿ ಹಿಂದೆ-ಮುಂದೆ ಬೇರೆ ಬೇರೆ ನಂಬರ್​ ಕಂಡು ಗಾಬರಿಗೊಂಡ ಜನ: ಅಸಲಿಯತ್ತು ಹೀಗಿದೆ ನೋಡಿ..!

Police Vehicle
Published on

ಗದಗ: ಇಂದು ಬೆಳಗ್ಗೆ ಗದಗಿನಲ್ಲಿ ಪತ್ತೆಯಾದ ಪೊಲೀಸ್​ ಸ್ಟಿಕ್ಕರ್ ಅಂಟಿಸಿದ್ದ ಕಾರಿನಲ್ಲಿ ಮುಂದೆ ಹಾಗೂ ಹಿಂದೆ ಬೇರೆ ಬೇರೆ ನಂಬರ್​ ಇದ್ದಿದ್ದು, ಕೆಲ ಕಾಲ ಗೊಂದಲ ವಾತಾವರಣವನ್ನು ಸೃಷ್ಟಿ ಮಾಡಿತು.

ಗದಗ ನಗರದ ಪಂಡಿತ ಪುಟ್ಟರಾಜ ಗವಾಯಿ ಬಸ್ ನಿಲ್ದಾಣದ ಬಳಿ ನಿಂತಿದ್ದ ಕಾರನ್ನು ನೋಡಿ ಬಹುತೇಕರು ಪೊಲೀಸ್​ ಕಾರು ಅಂದುಕೊಂಡಿದ್ದರು. ಆದರೆ, ಕಾರಿನ ಹಿಂದೆ ಮತ್ತು ಮುಂದೆ ನಂಬರ್​ ನೋಡಿ ಗಾಬರಿಯಾದರು. ಏಕೆಂದರೆ ಎರಡು ನಂಬರ್​ ಬೇರೆ ಬೇರೆ ಆಗಿತ್ತು.

ಇದು ಪೊಲೀಸರ ಗಮನಕ್ಕೆ ಬಂದು ತಕ್ಷಣ ಪರಿಶೀಲಿಸಿದಾಗ ವಾಹನದ ಅಸಲಿಯತ್ತ ಬಯಲಾಗಿದೆ. ಶೂಟಿಂಗ್​ಗೆ ಬಂದ ನಕಲಿ ಪೊಲೀಸ್ ಕಾರನ್ನು ನೋಡಿ ಜನರು ಕೆಲ ಕಾಲ ಗೊಂದಲಕ್ಕೀಡಾಗಿದ್ದಾರೆ. ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶೂಟಿಂಗ್​ಗೆ ಕಾರನ್ನು ಬಳಸಲಾಗಿದೆ.

ಚಿತ್ರದಲ್ಲಿನ ಪೊಲೀಸ್ ಅಧಿಕಾರಿ ಪಾತ್ರಕ್ಕೆ ಬಳಸುತ್ತಿದ್ದ ಬೊಲೆರೊ ಕಾರನ್ನು ರಸ್ತೆಯಲ್ಲಿ ಕಂಡು ಜನರು ತಬ್ಬಿಬ್ಬಾಗಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರಿಂದ ಪರಿಶೀಲನೆ ನಡೆದಿದೆ. ಚಿತ್ರೀಕರಣ ಅನುಮತಿ ಪತ್ರ ಪರಿಶೀಲಿಸಿ ಬಳಿಕ ಕಾರನ್ನು ಬಿಟ್ಟು ಕಳುಹಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net