ನನ್ನ ಮೊಮ್ಮಗಳು ಪುಣ್ಯವಂತೆ... ಮೊದಲ ಬಾರಿಗೆ ಮೊಮ್ಮಗಳ ಸಾವಿನ ಬಗ್ಗೆ ಮಾತನಾಡಿದ ಜಿ.ಟಿ. ದೇವೇಗೌಡ

GTD
Published on

ಮೈಸೂರು: ನನ್ನ ಮೊಮ್ಮಗಳು ಪುಣ್ಯವಂತೆ. ನಟ ಪುನೀತ್ ರಾಜ್​ಕುಮಾರ್ ಅವರ ನಿಧನಕ್ಕೆ ಬಂದ ರೀತಿಯಲ್ಲಿ ಸಾಕಷ್ಟು ಗಣ್ಯರು ಹಾಗೂ ಜನರು ಸಾವಿನ ದಿನ ಬಂದಿದ್ದರು ಎಂದು ಶಾಸಕ ಜಿ.ಟಿ. ದೇವೇಗೌಡ ಅವರು ಹೇಳಿದರು.

ಮೊಮ್ಮಗಳು ತೀರಿಕೊಂಡ ಬಳಿಕ ಮೊದಲ ಬಾರಿಗೆ ಮೊಮ್ಮಗಳ ಸಾವಿನ ಬಗ್ಗೆ ಜಿ.ಟಿ. ದೇವೇಗೌಡ ಅವರು ಮಾತನಾಡಿದರು. ನನ್ನ ಮೊಮ್ಮಗಳು ಬಹಳ ಚೂಟಿಯಾಗಿದ್ದಳು. ಅವಳಿಗೆ ಕ್ಯಾನ್ಸರ್ ಬಂದಿತ್ತು. ಆದರೆ, ಏಳು ತಿಂಗಳಲ್ಲಿ ಅವಳು ಕ್ಯಾನ್ಸರ್ ಗೆದಿದ್ದಳು. ವೈದ್ಯರ ಕೂಡ ಕ್ಯಾನ್ಸರ್ ಮುಕ್ತ ಎಂದು ಹೇಳಿ ಸಂತೋಷ ಪಟಿದ್ದರು. ಆದರೆ, ಅವಳಿಗೆ ದಿಢೀರನೇ ಆ ಲಕ್ಷಣಗಳು ಕಾಣಿಸಿಕೊಂಡು ಸಾವು ಬಂತು ಎಂದು ಬೇಸರ ವ್ಯಕ್ತಪಡಿಸಿದರು.

ಗೌರಿ ಸಾವಿನ ಹಿನ್ನೆಲೆಯಲ್ಲಿ ಎಲ್ಲಾ ರಾಜಕೀಯ ಮುಖಂಡರು ಸಾಂತ್ವನ ಹೇಳಿದ್ದಾರೆ. ಯಾವ ಪಕ್ಷದವರ ಜೊತೆಗೂ ರಾಜಕಾರಣ ಮಾತನಾಡಿಲ್ಲ. ಮಾಜಿ ಸಿಎಂ ಕುಮಾರಸ್ವಾಮಿ‌ ಅವರ ಜೊತೆ ಮಾತು ಬಿಟ್ಟು ಎರಡೂವರೆ ವರ್ಷವಾಗಿತ್ತು. ಅವರು ಕೂಡ ಬಂದು ಸಾಂತ್ವಾನ ಹೇಳಿದ್ದಾರೆ ಎಂದರು.

ನಿಖಿಲ್ ಕುಮಾರಸ್ಚಾಮಿ ನಮ್ಮ ಕುಟುಂಬದ ಸದಸ್ಯ ಇದ್ದಂತೆ. ನನ್ನ ಮಗ ಮತ್ತು ನಿಖಿಲ್ ಆತ್ಮೀಯ ಸ್ನೇಹಿತರು. ಹೀಗಾಗಿ ನಮ್ಮ ನೋವಿನ ಜೊತೆಗೆ ಅವರಿದ್ದಾರೆ. ರಾಜಕಾರಣ ವಿಚಾರವನ್ನು ಮುಂದೆ ಮಾತನಾಡುತ್ತೇನೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net