ಈ ಬಾರಿಯ ಅಪ್ಪಂದಿರ ದಿನಕ್ಕೆ #ಅಪ್ಪನಪ್ರೀತಿಯಭಾಷೆ ಅಭಿಯಾನ ಪ್ರಾರಂಭಿಸಿದೆ ಕೂ ಅಪ್ಲಿಕೇಶನ್

Koo app
Published on

ಬೆಂಗಳೂರು: ಈ ಅಪ್ಪಂದಿರ ದಿನದಂದು ಪಿತೃತ್ವದ ವಿಶೇಷ ಪ್ರೀತಿಗೆ ನಮನ ಸಲ್ಲಿಸುತ್ತಾ, ಕೂ, ಭಾರತದ ಅತ್ಯಂತ ಪ್ರೀತಿಯ ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಕೂ ಅಪ್ಲಿಕೇಶನ್ #ಅಪ್ಪನಪ್ರೀತಿಯಭಾಷೆ ಎಂಬ ಹೃದಯಸ್ಪರ್ಶಿ ಅಭಿಯಾನವನ್ನು ಪ್ರಾರಂಭಿಸಿದೆ.

ಹಲವಾರು ಉತ್ತೇಜಕ ಕ್ರಮಗಳನ್ನು ಪರಿಚಯಿಸುವ ಈ ಅಭಿಯಾನವು ತಂದೆ ಮತ್ತು ಮಕ್ಕಳ ನಡುವಿನ ಮಾತಿಗೂ ಮೀರಿದ ಪ್ರೀತಿ ಮತ್ತು ವಾತ್ಸಲ್ಯವನ್ನು ಕೇಂದ್ರೀಕರಿಸುವ ಈ ಅಭಿಯಾನವು ಬಳಕೆದಾರರು ತಮ್ಮ ತಂದೆಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಲು ಪ್ರೇರೇಪಿಸುತ್ತದೆ.

#ಅಪ್ಪನಪ್ರೀತಿಯಭಾಷೆ ಅಭಿಯಾನವು ಭಾರತೀಯ ಅಪ್ಪಂದಿರು ತಮ್ಮ ಮಕ್ಕಳ ಬಗ್ಗೆ ವಾತ್ಸಲ್ಯ ಮತ್ತು ಕಾಳಜಿಯನ್ನು ವ್ಯಕ್ತಪಡಿಸಲು ಬಳಸುವ ಪರೋಕ್ಷ ಪದಗಳನ್ನು ಕೇಂದ್ರೀಕರಿಸುತ್ತದೆ ಮತ್ತು ಸಾಮಾನ್ಯವಾಗಿ 'ದುಡ್ಡೇನು ಹಿತ್ತಲ ಗಿಡದಲ್ಲಿ ಬೆಳೆಯುತ್ತಾ' ಎಂಬ ವಿಡಂಬನೆಗಳನ್ನು ಆಧರಿಸಿದೆ.

#ಅಪ್ಪನಪ್ರೀತಿಯಭಾಷೆ ನೊಂದಿಗೆ, ಬಳಕೆದಾರರು ತಮ್ಮ ತಂದೆಯ ಒಡನಾಟದ ಕುರಿತ ಸುಂದರ ಅನುಭವಗಳನ್ನು ಹಂಚಿಕೊಳ್ಳಲು ಹಾಗೂ ಸಣ್ಣ ಕಥೆಗಳು, ಫೋಟೋಗಳು, ಮೀಮ್‌ಗಳು ಮತ್ತು ವೀಡಿಯೊಗಳ ಮೂಲಕ ಆಸಕ್ತಿದಾಯಕ ನೆನಪುಗಳನ್ನು ಹಂಚಿಕೊಳ್ಳಲು ಪ್ರೋತ್ಸಾಹಿಸಲಾಗುತ್ತದೆ. ಬಳಕೆದಾರರು ತಮ್ಮ ತಂದೆಯ ಸೂಪರ್ ಹೀರೋ ಕ್ಷಣಗಳನ್ನು, ಅಂದರೆ, ಅಪ್ಪ ತಮ್ಮ ಬಗ್ಗೆ ವಹಿಸಿದ ವಿಶಿಷ್ಟ ಕಾಳಜಿ ಹಾಗೂ ಅವರ ಪ್ರೀತಿಯನ್ನು ಧಾರೆ ಎರೆದ ಅನನ್ಯ ಕ್ಷಣಗಳನ್ನು ನೆನಪಿಸಿಕೊಳ್ಳಬಹುದು.

ಈ ಅಭಿಯಾನದ ಅಂಗವಾಗಿ, ಕವಿಗಳು ತಮ್ಮ ತಂದೆಗೆ ಕವನದ ಮೂಲಕ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲು ಕೂ ಆಪ್ ವೇದಿಕೆಯಲ್ಲಿ ವಿಶೇಷ ಕವನ ಸ್ಪರ್ಧೆಯನ್ನು ಸಹ ಏರ್ಪಡಿಸಿದೆ. ಕೂ ಅಪ್ಲಿಕೇಶನ್ ತಮ್ಮ ಮೂಲ ರಚನೆಗಳನ್ನು ಬಹು ಭಾಷೆಗಳಲ್ಲಿ ಸಕ್ರಿಯವಾಗಿ ಹಂಚಿಕೊಳ್ಳುವ ಕವಿಗಳ ಶ್ರೀಮಂತ ಮತ್ತು ನಿರಂತರವಾಗಿ ಬೆಳೆಯುತ್ತಿರುವ ಸಮುದಾಯವನ್ನು ಹೊಂದಿದೆ.

ಅಭಿಯಾನದ ಹಿಂದಿನ ಚಿಂತನೆಯನ್ನು ಕೂ ವಕ್ತಾರರು ವಿವರಿಸುತ್ತಾ, “ಹಲವಾರು ಭಾರತೀಯ ಅಪ್ಪಂದಿರು ತಮ್ಮ ಪ್ರೀತಿಯನ್ನು ನೇರವಾಗಿ ಪದಗಳ ಮೂಲಕ ವ್ಯಕ್ತಪಡಿಸದಿದ್ದರೂ, ಅವರು ತಮ್ಮ ಪ್ರೀತಿಯನ್ನು ಮಕ್ಕಳಿಗೆ ಭರವಸೆ ನೀಡುವ ತಮ್ಮದೇ ಆದ ಮಾರ್ಗವನ್ನು ಹೊಂದಿದ್ದಾರೆ. ಸಾಮಾನ್ಯವಾಗಿ ಬುದ್ಧಿ, ಹಾಸ್ಯ ಮತ್ತು ವ್ಯಂಗ್ಯದಿಂದ ಕೂಡಿರುವ ಸರಳ ನುಡಿಗಟ್ಟುಗಳು ಮತ್ತು ಅಭಿವ್ಯಕ್ತಿಗಳು ತಂದೆ ಮತ್ತು ಮಕ್ಕಳ ನಡುವಿನ ಬಂಧವನ್ನು ವ್ಯಾಖ್ಯಾನಿಸುತ್ತದೆ. ಸಾಮಾಜಿಕ ವೇದಿಕೆಯಾಗಿ, ಕೂ ಒಂದು ಅನನ್ಯ ಸಮುದಾಯವನ್ನು ನಿರ್ಮಿಸಿದೆ, ಅಲ್ಲಿ ಬಳಕೆದಾರರು ತಮ್ಮ ಆಯ್ಕೆಯ ಭಾಷೆಯಲ್ಲಿ ಮುಕ್ತವಾಗಿ ವ್ಯಕ್ತಪಡಿಸುತ್ತಾರೆ ಮತ್ತು ಅವರ ಜೀವನದ ಕ್ಷಣಗಳನ್ನು ಅನುಭವಿಸುತ್ತಾರೆ. #ಅಪ್ಪನಪ್ರೀತಿಯಭಾಷೆ ಮೂಲಕ ಯಾವುದೇ ಹಿಂಜರಿಕೆಯಿಲ್ಲದೆ ತಮ್ಮ ತಂದೆಯ ಮೇಲಿನ ಪ್ರೀತಿಯನ್ನು ತೋರ್ಪಡಿಸಲು ನಾವು ಎಲ್ಲಾ ಬಳಕೆದಾರರನ್ನು ಆಹ್ವಾನಿಸುತ್ತೇವೆ. ಎಲ್ಲಾ ತಂದೆಯರಿಗೆ ಮತ್ತು ತಂದೆಯಾಗುವವರಿಗೆ ಅಪ್ಪಂದಿರ ದಿನದ ಶುಭಾಷಯಗಳನ್ನು ಹಾರೈಸುತ್ತೇವೆ!

Koo App
Baat koi bhi ho, papa se sidha reply kahan aana hai.😝 Yeh #PapaKiLoveLanguage bhi na, Daant aur Dulaar ka perfect mixture hai.🥰 Share kariye apne #PapaKiLoveLanguage & jeetiye Koo Goodies. 🎁 #FathersDay #ContestAlert
View attached media content
-Koo (@KooOfficial)17 June 2022
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net