ಧಾರವಾಡದ ಸೂಪರ್​ ಮಾರ್ಕೆಟ್​ನಲ್ಲಿ ಎಸಿಪಿ ಮೇಲೆಯೇ ಪೆಟ್ರೋಲ್ ಎರಚಿದ ವ್ಯಕ್ತಿಯಿಂದ ಹೈಡ್ರಾಮ!

ACP Anusha
Published on

ಧಾರವಾಡ: ವ್ಯಕ್ತಿಯೊಬ್ಬ ಎಸಿಪಿ ಮೇಲೆ ಪೆಟ್ರೋಲ್​ ಎರಚಿರುವ ಘಟನೆ ಧಾರವಾಡದ ಸೂಪರ್​ ಮಾರ್ಕೆಟ್​ನಲ್ಲಿ ಗುರುವಾರ ನಡೆದಿದೆ.

ಅನಧಿಕೃತ ಅಂಗಡಿ ತೆರವು ವೇಳೆ ಪೊಲೀಸರ ಕಾರ್ಯಾಚರಣೆ ವಿರೋಧಿಸಿ ಎಂ.ಎಂ. ಚೌಧರಿ ಎಂಬಾತ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಯತ್ನಿಸಿದ್ದಾನೆ. ಈ ವೇಳೆ ತಡೆಯಲು ಬಂದ ಪೊಲೀಸರ ಮೇಲೆಯೇ ಪೆಟ್ರೋಲ್​ ಎರಚಿದ ಚೌಧರಿ ಅವಾಂತರ ಸೃಷ್ಟಿಸಿದರು.

ಚೌಧರಿ ಅವರು ಸೂಪರ್ ಮಾರ್ಕೆಟ್ ವ್ಯಾಪಾರಿಗಳ ಪರ ನ್ಯಾಯವಾದಿಯಾಗಿದ್ದಾರೆ. ಮಹಾನಗರ ಪಾಲಿಕೆಯಿಂದ ನಿನ್ನೆ ಅನಧಿಕೃತ ಅಂಗಡಿ ತೆರವು ಕಾರ್ಯ ನಡೆಯುತ್ತಿತ್ತು. ತೆರವು ವಿರೋಧಿಸಿ ಚೌಧರಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಡೆಯಲು ಹೋದ ಎಸಿಪಿ ಅನುಷಾ ಮೇಲೆ ಎರಚಿ ಹುಚ್ಚಾಟ ಮೆರೆದಿದ್ದು, ಇದಕ್ಕೆ ಸಂಬಂಧಿಸಿದ ಪೆಟ್ರೋಲ್​ ಹೈಡ್ರಾಮಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net